Advertisement

ನೇಪಾಲದೆದುರು ಮುಗ್ಗರಿಸಿದ ಭಾರತ

12:30 AM Feb 13, 2019 | Team Udayavani |

ಭುವನೇಶ್ವರ: “ಗೋಲ್ಡ್‌ ಕಪ್‌’ ಕೂಟದಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದ ಭಾರತೀಯ ವನಿತಾ ಫ‌ುಟ್‌ಬಾಲ್‌ ತಂಡ ಸೋಮವಾರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ನೇಪಾಲ ವಿರುದ್ಧ ಸೋಲನುಭವಿಸಿದೆ. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನೇಪಾಲ  2-1 ಗೋಲುಗಳ ಅಂತರದಿಂದ ಭಾರತವನ್ನು ಪರಾಭವಗೊಳಿಸಿದೆ. ನೇಪಾಲ ತಂಡದ ಸಬಿತ್ರಾ 2 ಗೋಲು ಬಾರಿಸಿ ಗೆಲುವಿಗೆ ಕಾರಣರಾದರು.  ಭಾರತ ಪರ ರತ್ನಬಾಲಾ ದೇವಿ ಏಕೈಕ ಗೋಲು ಹೊಡೆದರು. ಮೊದಲ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ಜಪಾನ್‌ ತಂಡವನ್ನು ಮಣಿಸಿತ್ತು. ಆದರೆ 2ನೇ ಪಂದ್ಯದಲ್ಲಿ ಎಡವಿದ ಭಾರತೀಯ ವನಿತೆಯರು ಶರಣಾಗಿದ್ದಾರೆ.

Advertisement

4ನೇ ನಿಮಿಷದಲ್ಲಿ ಮೊದಲ ಗೋಲು 
ಪಂದ್ಯ ಆರಂಭವಾದ 4ನೇ ನಿಮಿಷದಲ್ಲಿ ಸಬಿತ್ರಾ ಗೋಲು ಬಾರಿಸಿ ನೇಪಾಲಕ್ಕೆ ಮುನ್ನಡೆ ತಂದುಕೊಟ್ಟರು. 2 ನಿಮಿಷ ಕಳೆಯುವಷ್ಟರ‌ಲ್ಲಿ ಮತ್ತೂಂದು ಗೋಲು ಹೊಡೆದ ಸಬಿತ್ರಾ ಮುನ್ನಡೆಯನ್ನು 2-0ಕ್ಕೇರಿಸಿದರು. ಆ ಬಳಿಕ ರಕ್ಷಣಾತ್ಮಕವಾಗಿ ಆಡಿದ ನೇಪಾಲ ತಂಡ ಭಾರತಕ್ಕೆ ಗೋಲು ಬಾರಿಸುವ ಅವಕಾಶಕ್ಕೆ ತಡೆಯೊಡ್ಡುವಲ್ಲಿ ನಿರತವಾಯಿತು. ಈ ವೇಳೆ ಗೋಲು ಬಾರಿಸಲು ಭಾರತ ಮಾಡಿದ ಹೆಚ್ಚಿನ ಎಲ್ಲ ಪ್ರಯತ್ನಗಳೆಲ್ಲವೂ ವಿಫ‌ಲವಾದವು. ಪಂದ್ಯ ಮುಗಿಯುವ ಹಂತದಲ್ಲಿ (83ನೇ ನಿಮಿಷ) ರತ್ನಬಾಲಾ ಗೋಲು ಹೊಡೆಯಲು ಯಶಸ್ವಿಯಾದರು. ಆಬಳಿಕ ಸಮಬಲ ಸಾಧಿಸಲು ಭಾರತೀಯ ವನಿತೆಯರು ಶಕ್ತಿಮೀರಿ ಪ್ರಯತ್ನಿಸಿದರೂ ಯಶಸ್ಸು ಒಲಿಯಲಿಲ್ಲ.

ಗೋಲ್ಡ್‌  ಕಪ್‌ ಕೂಟ
ಭಾರತ, ಮ್ಯಾನ್ಮಾರ್‌, ನೇಪಾಲ ಹಾಗೂ ಇರಾನ್‌ ದೇಶಗಳನ್ನೊಳಗೊಂಡ “ಗೋಲ್ಡ್‌ ಕಪ್‌’ ಕೂಟವನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಈ ಕೂಟವನ್ನು ಎಎಫ್ಸಿ 2020 ಒಲಿಂಪಿಕ್‌ ಕೂಟದ ಅರ್ಹತಾ ಕೂಟಕ್ಕೆ ತಯಾರಿಯಾಗಿ ಆಡಲಾಗುತ್ತಿದೆ. ಈಗಾಗಲೇ 6 ಅಂಕಗಳನ್ನು ಗಳಿಸಿರುವ ಮ್ಯಾನ್ಮಾರ್‌ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಹಾಗೂ ನೇಪಾಲ ತಂಡಗಳೆರಡೂ 3 ಅಂಕಗಳೊಂದಿಗೆ ಅನುಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಇರಾನ್‌ ಇನ್ನಷ್ಟೇ ಖಾತೆ ತೆರೆಯಬೇಕಾಗಿದೆ. ಅಗ್ರ 2 ತಂಡಗಳು ಫೈನಲ್‌ಗೆ ಪ್ರವೇಶಿಸಲಿವೆ. ಲೀಗ್‌ ಹಂತದಲ್ಲಿ ಭಾರತ ತನ್ನ ಕೊನೆಯ ಪಂದ್ಯವನ್ನು ಮ್ಯಾನ್ಮಾರ್‌ ವಿರುದ್ಧ ಆಡಲಿದೆ. ಈ ಪಂದ್ಯ ಬುಧವಾರ ನಡೆಯಲಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಇರಾನ್‌-ನೇಪಾಲ ಮುಖಾಮುಖೀಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next