Advertisement

ಮಧ್ಯಪ್ರದೇಶ: ಹಳೆ ಮನೆ ಅವಶೇಷ ತೆರವುಗೊಳಿಸುವ ವೇಳೆ ಕಾರ್ಮಿಕರಿಗೆ ಸಿಕ್ತು 86 ಚಿನ್ನದ ನಾಣ್ಯ!

04:14 PM Aug 28, 2022 | Team Udayavani |

ಮಧ್ಯ ಪ್ರದೇಶ: ಹಳೆಯ ಮನೆಯ ಅವಶೇಷಗಳನ್ನು ತೆರವುಗೊಳಿಸುವ ವೇಳೆ ಕಾರ್ಮಿಕರಿಗೆ 60 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯಗಳು ಸಿಕ್ಕಿರುವ ಘಟನೆ ಮಧ್ಯ ಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕೆಲ ದಿನಗಳ ಹಿಂದೆ 8 ಮಂದಿ ಕಾರ್ಮಿಕರು ಜಿಲ್ಲೆಯ ಹಳೆಯ ಮನೆಯೊಂದನ್ನು ನೆಲಸಮಗೊಳಿಸಿ, ಅವಶೇಷಗಳನ್ನು ತೆಗೆಯುವ ವೇಳೆ ಸುಮಾರು 86 ಚಿನ್ನದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಕಾರ್ಮಿಕರು ಯಾರಿಗೂ ತಿಳಿಯದ ಹಾಗೆ, ಸ್ಥಳೀಯ ಪೊಲೀಸರಿಗೂ ಮಾಹಿತಿಯನ್ನು ನೀಡದೆ  ತಮ್ಮ ತಮ್ಮೊಳಗೆ ಹಂಚಿಕೊಂಡಿದ್ದಾರೆ.

ಹೇಗೋ ವಿಷಯವನ್ನು ತಿಳಿದ ಸ್ಥಳೀಯ ಪೊಲೀಸರು 8 ಮಂದಿ ಕಾರ್ಮಿಕರನ್ನು ಬಂಧಿಸಿದ್ದಾರೆ. ಅವರಿಂದ 1 ಕಿ.ಗ್ರಾಂ ತೂಕದ 86  ಚಿನ್ನದ ನಾಣ್ಯಗಳನ್ನು ಜಪ್ತಿ ಮಾಡಿದ್ದಾರೆ.

ಈ ಬಗ್ಗೆ ಮಾತಾನಾಡಿರುವ ಸ್ಥಳೀಯ ಎಸ್‌ ಪಿ. ದೇವೇಂದ್ರ ಪಾಟಿದಾರ್, ಕೆಲ ದಿನಗಳ ಹಿಂದೆ ಹಳೆ ಮನೆಯ ಅವಶೇಷವನ್ನು ತೆರವುಗೊಳಿಸುವ ವೇಳೆ ಕಾರ್ಮಿಕರಿಗೆ ಚಿನ್ನದ ನಾಣ್ಯಗಳು ಸಿಕ್ಕಿದೆ. ಪುರಾತತ್ವ ಮಹತ್ವವನ್ನು ಹೊಂದಿರುವ ನಾಣ್ಯವನ್ನು ಪೊಲೀಸರಿಗೆ ತಿಳಿಸದೆ  ಹಂಚಿಕೊಂಡಿರುವ ಕಾರ್ಮಿಕರನ್ನು ಬಂಧಿಸಲಾಗಿದೆ. ಇದರ ಮೌಲ್ಯ 60 ಲಕ್ಷ ರೂ.ಇರಬಹುದು. ಇದನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ನೀಡುತ್ತೇವೆ. ಅದನ್ನು ಅವರು ಪರಿಶೀಲನೆ ನಡೆಸುತ್ತಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next