Advertisement

ರಾಮೇಶ್ವರ: 60 ಲಕ್ಷ ರೂ. ಬೆಲೆಯ 2.50 ಕಿಲೋ ಚಿನ್ನ ವಶ; ಇಬ್ಬರ ಬಂಧನ

11:50 AM Jul 24, 2017 | Team Udayavani |

ರಾಮೇಶ್ವರ, ತಮಿಳು ನಾಡು : ಇಲ್ಲಿಗೆ ಸಮೀಪದಲ್ಲಿ ಕಾರೊಂದರಿಂದ ಕಸ್ಟಮ್ಸ್‌ ಅಧಿಕಾರಿಗಳು 2.5 ಕಿಲೋ ತೂಕದ, ಸುಮಾರು 60 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿರುವುದು ವರದಿಯಾಗಿದೆ.

Advertisement

ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್‌ ಇಲಾಖೆಯ ಅಧಿಕಾರಿಗಳು ಖಚಿತ ಸುಳಿವಿನ ಮೇರೆಗೆ ಇಲ್ಲಿಗೆ ಸಮೀಪದ ನ್ಯೂ ರೋಡ್‌ನ‌ಲ್ಲಿ  ಕಾರೊಂದನ್ನು ತಡೆದು ಅದರೊಳಗಿದ್ದ  2 ಕಿಲೋ 400 ಗ್ರಾಂ ತೂಕದ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡರು. ಇವುಗಳನ್ನು ಕಾರಿನ ಸೀಟಿನಡಿ ಅವಿತಿಡಲಾಗಿತ್ತು. 

ಕಾರೊಳಗಿದ್ದ ಇಬ್ಬರು ಕೇರಳದ ತೃಶ್ಶೂರಿನವರೆಂದು ಗೊತ್ತಾಗಿದೆ. ಬಂಧಿಸಲ್ಪಟ್ಟಿರುವ ಇವರನ್ನು ಪ್ರಶ್ನಿಸುವುದಕ್ಕಾಗಿ ರಾಮನಾಥಪುರಕ್ಕೆ ಒಯ್ಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next