Advertisement

ಹೈದರಾಬಾದ್ ಮೂಲದ ಸ್ಟಾರ್ಟಪ್: ಭಾರತದ ಮೊದಲ ರಿಯಲ್- ಟೈಮ್  ಚಿನ್ನದ ಎಟಿಎಂ!

01:29 PM Dec 07, 2022 | Team Udayavani |

ಹೈದರಾಬಾದ್ : ಹೈದರಾಬಾದ್ ಮೂಲದ ಸ್ಟಾರ್ಟಪ್ ‘ಓಪನ್‌ಕ್ಯೂಬ್ ಟೆಕ್ನಾಲಜೀಸ್‌’ ನ ತಂತ್ರಜ್ಞಾನ ಬೆಂಬಲದೊಂದಿಗೆ “ಗೋಲ್ಡ್ ಸಿಕ್ಕ” ( Goldsikka ) ತನ್ನ ಮೊದಲ ಗೋಲ್ಡ್ ಎಟಿಎಂ ಅನ್ನು ಬೇಗಂಪೇಟೆಯಲ್ಲಿ ಪ್ರಾರಂಭಿಸಿದೆ.

Advertisement

ಇದು ಭಾರತದ ಮೊದಲ ಗೋಲ್ಡ್ ಎಟಿಎಂ ಮತ್ತು ವಿಶ್ವದ ಮೊದಲ ರಿಯಲ್ ಟೈಮ್ ಗೋಲ್ಡ್ ಎಟಿಎಂ ಎಂದು ಖ್ಯಾತಿ ಹೊಂದಿದೆ. ಈ ಎಟಿಎಂ 0.5 ಗ್ರಾಂ ನಿಂದ 100 ಗ್ರಾಂವರೆಗಿನ ವಿವಿಧ ಮುಖಬೆಲೆಯ ಚಿನ್ನದ ನಾಣ್ಯಗಳನ್ನು ಒದಗಿಸುತ್ತದೆ. ಕಂಪನಿಯು ಹೈದರಾಬಾದ್‌ನ ವಿಮಾನ ನಿಲ್ದಾಣ, ಹೈದರಾಬಾದ್‌ನ ಹಳೆ ಪೇಟೆ ಮತ್ತು ಕರೀಂನಗರಗಳಲ್ಲಿ ಪ್ರಾಥಮಿಕ ಹಂತವಾಗಿ ಮೂರು ಯಂತ್ರಗಳನ್ನು ಪ್ರಾರಂಬಿಸುವ ಯೋಜನೆ ಹೊಂದಿದೆ. ಮುಂಬರುವ ಎರಡು ವರ್ಷಗಳಲ್ಲಿ ಭಾರತದಾದ್ಯಂತ 3,000 ಯಂತ್ರಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಹೈದರಾಬಾದ್‌ನಲ್ಲಿರುವ ಚಿನ್ನದ ಎಟಿಎಂನ ಗಮನಾರ್ಹ ಅಂಶಗಳು:

  1. “ಗೋಲ್ಡ್ ಸಿಕ್ಕ” ಎಟಿಎಂ ಸಂಸ್ಥೆಯ ಪ್ರಕಾರ “ಎಲ್ಲಾ ಬಗೆಯ ಗ್ರಾಹಕರಿಗೆ” ಬಳಕೆಯ ಅವಕಾಶವನ್ನು ನೀಡುವ ಗುರಿ ಹೊಂದಿದ್ದು, ಯಾರು ಬೇಕಾದರೂ ಚಿನ್ನವನ್ನು ಎಲ್ಲಿ ಬೇಕಾದರೂ ಹಿಂಪಡೆಯಬಹುದಾದ ಸೌಲಭ್ಯ ಒದಗಿಸುವ ನಿರ್ಧಾರ ಮಾಡಿದ್ದು 24×7 ಸೌಲಭ್ಯ ಒದಗಿಸುವ ಗುರಿ ಹೊಂದಿದೆ.
  2. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಹೊರತಾಗಿ, ಚಿನ್ನದ ನಾಣ್ಯಗಳನ್ನು ಪಡೆಯಲು ಖರೀದಿದಾರರು ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಸ್ಮಾರ್ಟ್ ಕಾರ್ಡ್‌ಗಳನ್ನು ಸಹ ಬಳಸಬಹುದಾಗಿದೆ.
  3. ಸಂಸ್ಥೆಯ ಮೊದಲ ಎಟಿಎಂ ಅನ್ನು ಬೇಗಂಪೇಟೆಯ ಅಶೋಕ ರಘುಪತಿ ಚೇಂಬರ್ಸ್‌ನಲ್ಲಿರುವ ಅದರ ಮುಖ್ಯ ಕಚೇರಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ನಗರದಾದ್ಯಂತ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅಂತಹ ಎಟಿಎಂಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
  4. ಚಿನ್ನದ ಬೆಲೆಯಲ್ಲಿನ ಬದಲಾವಣೆಯು ಮಾರುಕಟ್ಟೆಯ ಚಿನ್ನದ ಬೆಲೆಯನ್ನು ಆಧರಿಸಿದೆ. ಈ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 54,630 ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ ಚಿನ್ನದ ಬೇಡಿಕೆ ಮಾತ್ರ ಹೆಚ್ಚುತ್ತಲೇ ಇದೆ.
  5. ಚಿನ್ನದ ಎಟಿಎಂಗಳು 0.5 ಗ್ರಾಂ ನಿಂದ 100 ಗ್ರಾಂ ವರೆಗಿನ ಮುಖಬೆಲೆಯಲ್ಲಿ ಸರಬರಾಜು ಮಾಡುತ್ತದೆ. ಎಲ್ಲಾ ಚಿನ್ನದ ಕರೆನ್ಸಿಯು 24-ಕ್ಯಾರೆಟ್ ಚಿನ್ನವಾಗಿದೆ ಎಂದು “ಗೋಲ್ಡ್ ಸಿಕ್ಕ” ಸಂಸ್ಥೆ ದೃಢಪಡಿಸಿದೆ.
  6. “ಪ್ರತಿ ಎಟಿಎಂ ಸುಮಾರು 2-3 ಕೋಟಿ ರೂ ಮೌಲ್ಯದ 5 ಕೆಜಿ ಚಿನ್ನವನ್ನು ಇರಿಸಿಕೊಳ್ಳಬಹುದು ಸಾಮರ್ಥ್ಯವನ್ನು ಹೊಂದಿವೆ. 0.5 ಗ್ರಾಂ, 1 ಗ್ರಾಂ, 2 ಗ್ರಾಂ, 5 ಗ್ರಾಂ, 10 ಗ್ರಾಂ, 20 ಗ್ರಾಂ, 50 ಗ್ರಾಂ ಮತ್ತು 100 ಗ್ರಾಂ ಸೇರಿದಂತೆ ಎಂಟು ಆಯ್ಕೆಗಳು ಲಭ್ಯವಿರುತ್ತವೆ.
  7. ಭದ್ರತಾ ವಿಷಯಗಳನ್ನು ಗಮನಿಸಿದರೆ, ಯಂತ್ರದಲ್ಲಿ ಇನ್ಸೈಡ್ ಕ್ಯಾಮೆರಾ, ಎಚ್ಚರಿಕೆ ಅಲರಾಂ ವ್ಯವಸ್ಥೆ, ಸಿಸಿ ಟಿವಿ ಕ್ಯಾಮೆರಾಗಳಂತಹ ಭದ್ರತಾ ಕ್ರಮಗಳು ಒಳಗೊಂಡಿವೆ.
Advertisement

Udayavani is now on Telegram. Click here to join our channel and stay updated with the latest news.

Next