Advertisement

ಗೋಕಾಕ: ಸಮಾಜದಿಂದ ಅಸ್ಪೃಶ್ಯತೆ ಓಡಿಸಬೇಕಿದೆ-ಮಂಗೇಶ ಭೇಂಡೆ

04:15 PM Feb 01, 2024 | Team Udayavani |

ಉದಯವಾಣಿ ಸಮಾಚಾರ
ಗೋಕಾಕ: ಅಸ್ಪೃಶ್ಯತೆಯಂತಹ ಭೀಕರ ಕಾಯಿಲೆಯನ್ನು ಸಮಾಜದಿಂದ ಓಡಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.

Advertisement

ಬುಧವಾರ ನಗರದ ರಮೇಶಣ್ಣಾ ಕಾಲೋನಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಿಕ್ಕೋಡಿಯ ಕೇಶವ ಸ್ಮೃತಿ ಟ್ರಸ್ಟ್‌ ನೂತನವಾಗಿ ನಿರ್ಮಿಸಿದ ಪ್ರೇರಣಾ ಕಾರ್ಯಾಲಯದ ವಾಸ್ತು ಶಾಂತಿ ಹಾಗೂ ಲೋಕಾರ್ಪಣೆ ಸಮಾರಂಭದಲ್ಲಿ ವಕ್ತಾರರಾಗಿ
ಪಾಲ್ಗೊಂಡು ಅವರು, ಮಾತನಾಡಿದರು.

ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇಲ್ಲ. ನಾವೆಲ್ಲ ಒಂದೇ. ಸಾಮಾಜಿಕ ಸಾಮರಸ್ಯದ ಹಿಂದೂ ಮನೆಯಾಗಬೇಕು. ಇದಕ್ಕಾಗಿ ಪ್ರತಿಯೊಬ್ಬ ಸ್ವಯಂ ಸೇವಕರು ಪ್ರಯತ್ನಶೀಲರಾಗಿ ಕಾರ್ಯನಿರ್ವಹಿಸಬೇಕು.ಭಾರತ ಜಗತ್ತಿಗೆ ಜಗದ್ಗುರುವಾಗಬೇಕೆಂಬ ಗುರಿಯೊಂದಿಗೆ ದೇಶದಲ್ಲಿ ಲಕ್ಷಾಂತರ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಬೃಹತ್‌ ಸಮಾವೇಶ ಹಾಗೂ ಚಿಂತನಾ ಗೋಷ್ಠಿಗಳನ್ನು ಆಯೋಜಿಸಿ ನಾವೆಲ್ಲ ಹಿಂದು ಎಂದು ಜಾಗೃತಿ ಮೂಡಿಸಬೇಕು. ಮನೆ
ಮನೆಗೆ ತೆರಳಿ ನಿಧಿ  ಸಂಗ್ರಹಿಸಿ, ರಾಮಮಂದಿರ ಪ್ರತಿಷ್ಠಾಪಿಸಿ, ಐನೂರು ವರ್ಷಗಳ ಕಳಂಕವನ್ನು ತೊಳೆದುಕೊಂಡಿದ್ದೇವೆ. ಸಂಘದ ನೂರು ವರ್ಷದ ಆಚರಣೆ ಮಾಡಲು ಒಂದು ಲಕ್ಷ ಗ್ರಾಮಗಳಲ್ಲಿ ಸಂಘದ ಶಾಖೆಗಳನ್ನು ತೆರೆದು ಸಮಾಜ ಪರಿವರ್ತನೆ ಮಾಡಲು ಸ್ವಯಂ ಸೇವಕರು ಶ್ರಮಿಸಬೇಕೆಂದು ಹೇಳಿದರು.

ನಮಗೆ ಸ್ವಾತಂತ್ರ್ಯ ದೊರೆತು ಹಲವು ದಶಕಗಳು ಕಳೆದರೂ ನಮ್ಮಲ್ಲಿನ ಗುಲಾಮಗಿರಿ ಭಾವನೆ ಹೊಗಿಲ್ಲ. ಸ್ವದೇಶಿ ಮನೋಭಾವ
ಬೆಳೆದಿಲ್ಲ. ನಮ್ಮ ಭಾಷೆ, ಸಂಸ್ಕೃತಿಯನ್ನು ಬೆಳೆಸಬೇಕು. ಸ್ವದೇಶಿ ಕುರಿತು ಅರಿವು ಮೂಡಿಸಿ, ನಾಗಕರಿಕ ಕರ್ತವ್ಯಗಳ ಪಾಲನೆ ಮಾಡಲು ಸ್ವಯಂ ಸೇವಕರು ಕಲಿಸಬೇಕು. ಭಾರತ ದೇಶ ಶ್ರೇಷ್ಠವಾಗಲು, ನಮ್ಮ ಮನೆ ಹಿಂದೂ ಮನೆಯಾಗಿ ಮಾಡಲು ಕರೆ ನೀಡಿದರು.

Advertisement

ಸಾನ್ನಿಧ್ಯ ವಹಿಸಿ ಮಾತನಾಡಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಗಳು, ಇಂದು ಮಠಗಳು ಜಾತಿಗೆ ಸೀಮಿತವಾಗುತ್ತಿವೆ. ಆರ್‌ ಎಸ್‌ಎಸ್‌ನವರು ನಿರ್ಮಿಸಿರುವ ಈ ಪ್ರೇರಣಾ ಕಾರ್ಯಾಲಯ ಜಾತ್ಯತೀತ ಮಠವಾಗಿ ಹಿಂದೂ ರಾಷ್ಟ್ರ ಮಾಡಲು ಪ್ರೇರಣೆಯಾಗಿದೆ. ಸೈನಿಕರ ನಂತರ ಶಿಸ್ತು ಹಾಗೂ ದೇಶ ಪ್ರೇಮವನ್ನು ಸ್ವಯಂ ಸೇವಕರಲ್ಲಿ ಕಾಣುತ್ತಿದ್ದೇವೆ. ಯುವ ಪೀಳಿಗೆ ಈ ಸಂಘದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ತಿಳಿಸಿದರು.

ಮೂಡಲಗಿಯ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ, ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಘದ ಉತ್ತರ ಕರ್ನಾಟಕ ಪ್ರಾಂತ ಸಂಚಾಲಯ ಬಸವರಾಜ ಡಂಬಳ, ಕೇಶವ ಸ್ಪೃತಿ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ ಚುನಮರಿ, ಎಂ.ವೈ ಹಾರುಗೇರಿ, ಸಂಘ ಪರಿವಾರದ ಪ್ರಮುಖರಾದ ರಾಘವೇಂದ್ರ ಕಾಗವಾಡ, ನರೇಂದ್ರ, ಕೃಷ್ಣಾನಂದ ಕಾಮತ,
ಅರವಿಂದರಾವ್‌ ದೇಶಪಾಂಡೆ, ಶ್ರೀಧರ ನಾಡಿಗೇರ, ಶ್ರೀನಿವಾಸ ನಾಯ್ಕ, ಶಾಸಕಿ  ಶಶಿಕಲಾ ಜೊಲ್ಲೆ, ಮುಖಂಡರಾದ ಅಂಬಿರಾವ್‌
ಪಾಟೀಲ, ಸರ್ವೋತ್ತಮ ಜಾರಕಿಹೊಳಿ, ಜಯಾನಂದ ಮುನವಳ್ಳಿ, ಅಶೋಕ ಪೂಜೇರಿ ಸೇರಿದಂತೆ ಅನೇಕರು ಇದ್ದರು. ವಿಕಾಸ ನಾಯ್ಕ ಸ್ವಾಗತಿಸಿದರು, ಪ್ರಕಾಶ ವರ್ಜಿ ನಿರೂಪಿಸಿದರು, ಗಜಾನನ ವಾಗುಲೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next