ಗೋಕಾಕ: ನಗರದಲ್ಲಿ ವಾರಾಂತ್ಯ ಕರ್ಫ್ಯೂ ರವಿವಾರ ಯಶಸ್ವಿಯಾದರೂ ಅಧಿ ಕಾರಿಗಳ ಕಣ್ಣು ತಪ್ಪಿಸಿ ಜನರು ಕೋವಿಡ್ ನಿಯಮ ಗಾಳಿಗೆ ತೂರಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸಂಜೆ ವಾಯು ವಿಹಾರಕ್ಕೆ ಆಗಮಿಸಿದ್ದು ಕಂಡು ಬಂತು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಜಾರಿಗೊಳಿಸಿದ ವಾರಾಂತ್ಯ ಕರ್ಫ್ಯೂ ಇದ್ದರೂ ಕೆಲವು ಸ್ಥಳಗಳಲ್ಲಿ ಹೆಚ್ಚೆಚ್ಚು ಜನ ಸೇರುತ್ತ ಮಾಂಸ-ಮೀನು ಖರೀದಿ ಯಲ್ಲಿ ತೊಡಗಿದ್ದರು. ಸಂಜೆ ಅಲ್ಲಲ್ಲಿ ಗುಂಪು ಗುಂಪಾಗಿ ವಾಯು ವಿಹಾರಕ್ಕೆ ತೆರಳಿರುವ ಸಾರ್ವಜನಿಕರು ಮಾಸ್ಕ್, ಸಾಮಾಜಿಕ ಅಂತರವಿಲ್ಲದೇ ತಿರುಗಾಡುತ್ತಿರುವುದು ಕಂಡು ಬಂದಿತು.
ಕರ್ಫ್ಯೂ ಜಾರಿಯಲ್ಲಿದ್ದರೂ ರವಿವಾರವೂ ಅಂಗಡಿ-ಮುಂಗಟ್ಟು ಬಂದ್ ಮಾಡದ ವ್ಯಾಪಾರಿಗಳಿಗೆ ತಾಲೂಕು ಆಡಳಿತ ದಂಡ ವಿಧಿ ಸಿ ಬಿಸಿ ಮುಟ್ಟಿಸಿತು.