ಗೋಕಾಕ: ವಾರಾಂತ್ಯದ ಕರ್ಫ್ಯೂ ಪಟ್ಟಣದಲ್ಲಿಸಂಪೂರ್ಣ ಯಶಸ್ವಿಯಾಯಿತು. ಬೆಳಗಿನಜಾವದಿಂದ 10 ಗಂಟೆವರೆಗೆ ದಿನನಿತ್ಯದ ಅವಶ್ಯಕವಸ್ತುಗಳನ್ನು ಖರೀದಿಸಿ, ಜನರು ಸ್ವಯಂಪ್ರೇರಿತರಾಗಿ ಮನೆಯಲ್ಲೇ ಉಳಿದುಕೊಂಡುತಮ್ಮ ಬೆಂಬಲವನ್ನು ಸೂಚಿಸಿದರು.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದನಗರದ ಬಸವೇಶ್ವರ ವೃತ್ತ, ಸಂಗೋಳ್ಳಿರಾಯಣ್ಣ ವೃತ್ತ, ಬಾಫನಾ ಖೂಟ, ತಂಬಾಕಖೂಟ, ತರಕಾರಿ ಮಾರುಕಟ್ಟೆ, ನಾಕಾ ನಂ.1ರ ಚನ್ನಮ್ಮ ವೃತ್ತ ಸೇರಿದಂತೆ ಇತರ ಎಲ್ಲೆಡೆರಸ್ತೆಗಳು ಬಿಕೋ ಎನ್ನುತ್ತಿದ್ದವು.
ಹಾಲಿನ ಅಂಗಡಿ,ಔಷಧ, ಪೆಟ್ರೋಲ್ ಬಂಕ್‌ಗಳು ತೆರೆದಿದ್ದರೂಸಹ ಜನರು ಮನೆಯಿಂದ ರಸ್ತೆಗೆ ಇಳಿಯಲೇಇಲ್ಲ. ಆಟೋಗಳು ರಸ್ತೆಗೆ ಬರಲಿಲ್ಲ.
ರಸ್ತೆ ಸಾರಿಗೆಸಂಸ್ಥೆಯ ಶೇ.25 ರಷ್ಟು ಬಸ್‌ಗಳು ಸಂಚಾರನಡೆಸಿದರೂ ಕೂಡಾ ಪ್ರಯಾಣಿಕರು ಇರಲಿಲ್ಲ.ಕಾರಣವಿಲ್ಲದೇ ಸಂಚರಿಸುತ್ತಿದ್ದ ಬೈಕ್‌ಗಳನ್ನುಪೊಲೀಸರು ಸೀಜ್ ಮಾಡಿದರು.
ಅಗತ್ಯ ಸೇವೆಗಳಲ್ಲಿ ಒಂದಾದ ಆಸ್ಪತ್ರೆಗಳುಕಾರ್ಯ ನಿರ್ವಹಿಸಿದರೂ ಅಷ್ಟೊಂದುಪ್ರಮಾಣದಲ್ಲಿ ಜನರು ಆಸ್ಪತ್ರೆಗಳತ್ತಸುಳಿಯಲಿಲ್ಲ. ಕಾರ್ಯ ನಿರ್ವಹಿಸಿದಆಸ್ಪತ್ರೆಗಗಳು ಒಳರೋಗಿಗಳ ಚಿಕಿತ್ಸೆಗಳಿಗೆ ಮಾತ್ರಸೀಮಿತವಾದವು.