Advertisement

ಹೃದಯಾಘಾತದಿಂದ ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐ ಸಾವು!

08:20 PM Feb 24, 2023 | Team Udayavani |

ಗೋಕಾಕ: ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Advertisement

ಕಳೆದ ಇಪ್ಪತ್ತು ದಿನಗಳ ಹಿಂದೆ ವರ್ಗಾವಣೆಯಾಗಿ ಗೋಕಾಕ ಗ್ರಾಮೀಣ ಠಾಣೆಗೆ ಅಪರಾಧ ವಿಭಾಗಕ್ಕೆ ಆಗಮಿಸಿದ್ದರು. ಗುರುವಾರ ರಾತ್ರಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಪಿಎಸ್ಐ ಪಕೀರಪ್ಪಾ ವಾಯ್ ತಳವಾರ (55) ಮೂಲತಃ ಬೀಳಗಿ ತಾಲೂಕು ಶಿರಗುಪ್ಪಿ ಗ್ರಾಮದವರಾಗಿದ್ದಾರೆ. ಕಳೆದ ಇಪ್ಪತ್ತು ದಿನಗಳ ಹಿಂದಷ್ಟೇ ಬಂದು ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಘಟನೆ ಗೋಕಾಕ ನಗರ‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂದೇಹ :
ಫಕೀರಪ್ಪ ಅವರಿಗೆ ಪೊಲೀಸರು ಸಾಕಷ್ಟು ಸಲ ಫೋನ್ ಮಾಡಿದ್ದಾರೆ. ಆದರೆ ಅವರು ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಕೊಠಡಿ ಪರಿಶೀಲನೆ ನಡೆಸಿದಾಗ ನಿಧನರಾಗಿರುವುದು ಬೆಳಕಿಗೆ ಬಂದಿದೆ.

ಎಸ್‌ಪಿ ಭೇಟಿ :
ವಿಷಯ ತಿಳಿಯುತ್ತಲೇ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

Advertisement

ಇದನ್ನೂ ಓದಿ: ಪಂಜಾಬ್ ನಲ್ಲಿ ಪ್ರತಿಭಟನಾಕಾರರಿಂದ ಜೈಲಿಗೆ ಮುತ್ತಿಗೆ; ಲವ್‌ಪ್ರೀತ್ ಸಿಂಗ್ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next