Advertisement

ಮಧುಮೇಹಿಗಳಿಗೆ ಸಂತಸದ ಸುದ್ದಿ: ತಗ್ಗಲಿದೆ ಮಧುಮೇಹ ಔಷಧ ದರ

06:27 PM Jul 09, 2022 | Team Udayavani |

ಹೊಸದಿಲ್ಲಿ: ಮಧುಮೇಹಿಗಳಿಗೆ ಇದು ಸಂತಸದ ಸುದ್ದಿ. ಸಕ್ಕರೆ ಕಾಯಿಲೆಯ ನಿರ್ವಹಣೆಗೆ ಬಳ
ಸುವ ಸುಮಾರು 50 ಕಂಪೆನಿಗಳ 200ಕ್ಕೂ ಹೆಚ್ಚು ಔಷಧಗಳ ದರ ಶೇ. 50ರಿಂದ ಶೇ. 70ರಷ್ಟು ಇಳಿಕೆ ಆಗಲಿದೆ. ಆಗಸ್ಟ್‌ ಅಂತ್ಯದ ವೇಳೆಗೆ ಇದು ಜಾರಿಗೆ ಬರಲಿದೆ ಎಂದು ಔಷಧೋದ್ಯಮ ಕ್ಷೇತ್ರದ ಮೂಲಗಳು ತಿಳಿಸಿವೆ.

Advertisement

ಕೆಲವು ಕಂಪೆನಿಗಳು ಹೊಂದಿರುವ ಔಷಧ ಗಳ ಪೇಟೆಂಟ್‌ ಅವಧಿ ಮುಕ್ತಾಯಗೊಳ್ಳುವುದು ಇದಕ್ಕೆ ಕಾರಣ. ಟೈಪ್‌-2 ಮಧುಮೇಹಕ್ಕೆ ವೈದ್ಯರು ಶಿಫಾರಸು ಮಾಡುವ ಮೆರ್ಕ್‌ ಆ್ಯಂಡ್‌ ಕೊ. ಅಭಿವೃದ್ಧಿಪಡಿಸಿರುವ ಸ್ಟಿಯಾಗ್ಲಿಪ್ಟಿನ್‌ ಔಷಧದ ಪೇಟೆಂಟ್‌ ಶೀಘ್ರವೇ ಅಂತ್ಯ ವಾಗಲಿದೆ. ಮುಂಬಯಿಯ ಗ್ಲೆನ್‌ಮಾರ್ಕ್‌ ಫಾರ್ಮಾ ದೇಶದ ಔಷಧ ಮಾರುಕಟ್ಟೆಯಲ್ಲಿ ಈ ಔಷಧದ ಜೆನರಿಕ್‌ ರೂಪವನ್ನು ವಿತರಿಸಲಿದೆ. ಪ್ರತೀ ಮಾತ್ರೆಗೆ 10.5 ರೂ.ಗಳಿಂದ 19 ರೂ. ವರೆಗೆ ಇರಲಿದೆ.

ವಿಲ್ಡಾಗ್ಲಿಪ್ಟಿನ್‌ ಮತ್ತು ವಿಲ್ಡಾಗ್ಲಿಪ್ಟಿನ್‌-ಮೆಟ್‌ಫಾರ್ಮಿನ್‌ ಕಂಪೆನಿ ಹೊಂದಿರುವ ಪೇಟೆಂಟ್‌ ಮುಕ್ತಾಯ ಗೊಂಡಿದೆ. ಹೀಗಾಗಿ ಆ ಕಂಪೆನಿಯ ಔಷಧದ 150ಕ್ಕೂ ವಿವಿಧ ತದ್ರೂಪಿಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ಮಾರುಕಟ್ಟೆಗೆ ಬಂದಿವೆ. ಅಲ್ಲದೆ ಡಪಾಗ್ಲಿಫ್ಲೋಜಿನ್‌-ಮೆಟ್‌ಫೋರ್ಫಿನ್‌ ಎಂಬ ಔಷಧ ಸಂಯುಕ್ತದ ಪೇಟೆಂಟ್‌ ಕೂಡ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ 2020ರಿಂದ 2021ರ ಅವಧಿಯಲ್ಲಿ 8ರಿಂದ 80 ಬ್ರ್ಯಾಂಡ್‌ಗಳ ಔಷಧಗಳು ಮಾರುಕಟ್ಟೆಗೆ ಬಂದಿವೆ.

ಹೆಚ್ಚು ಔಷಧ ಕಂಪೆನಿಗಳು ಮಾರುಕಟ್ಟೆ ಪ್ರವೇಶ ಮಾಡುವುದರಿಂದ ಮಧುಮೇಹದ ಒಂದು ಮಾತ್ರೆಗೆ 12 ರೂ.ಗಳಿಂದ 17 ರೂ.ಗಳ ವರೆಗೆ ದರ ಇಳಿಕೆ ಮಾಡಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next