Advertisement

ಗೋಡ್ಸೆ ದೇಶಭಕ್ತ ಎಂದ ಪ್ರಜ್ಞಾ ಅವರನ್ನು ನಾನೆಂದೂ ಕ್ಷಮಿಸೆನು : ಪ್ರಧಾನಿ ಮೋದಿ

09:44 AM May 18, 2019 | Sathish malya |

ಖರಗೋಣ್‌ , ಮಧ್ಯ ಪ್ರದೇಶ : ನಾಥೂರಾಮ ಗೋಡ್ಸೆಯನ್ನು ನೈಜ ದೇಶ ಭಕ್ತ ಎಂದು ಹೇಳುವ ಮೂಲಕ ಮಹಾತ್ಮ ಗಾಂಧಿಯವರನ್ನು ಅವಮಾನಿಸಿರುವ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಠಾಕೂರ್‌ ಅವರನ್ನು ನಾನೆಂದೂ ಕ್ಷಮಿಸೆನು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಹಾಲಿ ಲೋಕಸಭಾ ಚುನಾವಣೆ ಪ್ರಯುಕ್ತ ಇಂದಿಲ್ಲಿ ನಡೆದ ತನ್ನ ಕೊನೆಯ ರಾಲಿಯಲ್ಲಿ ಟಿವಿ ವಾಹಿನಿ ಜತೆಗೆ ಮಾತನಾಡಿದ ಮೋದಿ, ಪ್ರಜ್ಞಾ ಸಿಂಗ್‌ ಠಾಕೂರ್‌ ಅವರ ಹೇಳಿಕೆ ಸಮಾಜ ವಿರೋಧಿಯಾಗಿದೆ ಎಂದು ಹೇಳಿದರು.

“ಗಾಂಧಿ ಮತ್ತು ಗೋಡ್ಸೆ ಬಗ್ಗೆ ಏನೇ ಹೇಳಲಾಗಿದ್ದರೂ ಆ ಹೇಳಿಕೆಗಳು ಬಲು ಕೆಟ್ಟವು ಮತ್ತು ಖಂಡನಾರ್ಹವಾದದ್ದು; ನಾಗರಿಕ ಸಮಾಜದಲ್ಲಿ ಈ ರೀತಿಯ ಭಾಷೆಗೆ ಅವಕಾಶವಿಲ್ಲ. ಈ ರೀತಿಯ ಆಲೋಚನೆ ಕೂಡ ಒಳ್ಳೆಯದಲ್ಲ. ಆದುದರಿಂದ ಈ ರೀತಿಯಲ್ಲಿ ಮಾತನಾಡುವವರು ಮಾತಿಗೆ ಮುನ್ನ ನೂರು ಸಲ ಆಲೋಚಿಸಬೇಕು; ಪ್ರಜ್ಞಾ ಕ್ಷಮೆಯಾಚಿಸಿದ್ದಾರಾದರೂ ನಾನು ಆಕೆಯನ್ನು ಹೃದಯದಾಳದಿಂದ ಕ್ಷಮಿಸಲಾರೆನು’ ಎಂದು ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next