Advertisement

ದೇವರ ಮೇಲೆ ಪ್ರೀತಿಯಿರಲಿ: ಡಾ|ಹೆಗ್ಗಡೆ

03:45 AM Feb 03, 2017 | Team Udayavani |

ಬೆಳ್ತಂಗಡಿ: ಅನುಗ್ರಹದ ನಂಬಿಕೆಯಿಂದ ದೇವರ ಜತೆ ಸಂಬಂಧ ಬೆಳೆಸಿಕೊಳ್ಳಬೇಕು. ದೇವರ ಜತೆ ಪ್ರೀತಿ ಇರಬೇಕು ವಿನಾ ಭೀತಿ ಇರಬಾರದು. ಪ್ರೀತಿಯಿಂದ ಮಾಡಿದ ಸೇವೆ ಭಗವಂತನನ್ನು ಸಂಪ್ರೀತನನ್ನಾಗಿಸುತ್ತದೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.

Advertisement

ಅವರು ಬುಧವಾರ ರಾತ್ರಿ ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿವರ್ತನೆ 
ಸಾಮಾನ್ಯರಲ್ಲಿ ಭಕ್ತಿ, ಶ್ರದ್ಧೆ ಬಂದಿದೆ. ದೇವಾಲಯ ಪುನರುಜ್ಜೀವನದ ಮನ ಬಂದಿದೆ. ಜನತೆ ಹಾಗೂ ಸಮಾಜ ಪರಿ
ವರ್ತನೆಯಾಗುತ್ತಿದೆ. ಸಾನ್ನಿಧ್ಯ ವೃದ್ಧಿಗೆ ಬ್ರಹ್ಮಕಲಶ ನಡೆಸಿದಂತೆ ಬ್ರಹ್ಮಕಲಶೋತ್ಸವ ಬಳಿಕವೂ ದೇವಾಲಯಗಳಿಗೆ ಭೇಟಿ ನೀಡಬೇಕು. ಅಷ್ಟೇ ಅಲ್ಲ ದೇವಾಲಯಗಳ ಸ್ವತ್ಛತೆ ಕುರಿತೂ ಗಮನ ಹರಿಸಬೇಕು. ತಿಂಗಳಿಗೆ ಒಮ್ಮೆಯಾದರೂ ದೇವಾಲಯಗಳ ಸ್ವತ್ಛತೆಗೆ ಜನತೆ ಗಮನ ನೀಡಬೇಕಾದ ಅಗತ್ಯ ಇದೆ. ಜನವರಿಯಲ್ಲಿ ರಾಜ್ಯದ 8 ಸಾವಿರ ದೇವಾಲಯಗಳನ್ನು 7 ಲಕ್ಷ ಸ್ವಯಂಸೇವಕರು ಶುಚಿಗೊಳಿಸಿದ್ದಾರೆ ಎಂದರು.

ಬದುಕಿಗೆ ಬದ್ಧತೆ: ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ದೇಗುಲಗಳು ನಮ್ಮ ಬದುಕಿಗೆ ಬದ್ಧತೆ ನೀಡುತ್ತದೆ. ಜೀವನ ಸಂಸ್ಕಾರ ನೀಡುತ್ತದೆ. ದೇಶದಲ್ಲಿ ಮೊದಲು ಬುದ್ಧಿಯೇ ಸಂಪತ್ತು ಎಂದಾಗಿತ್ತು. ಈಗ ಬುದ್ಧಿಜೀವಿ
ಗಳಿಂದ ಆಪತ್ತು ಎಂಬ ಸ್ಥಿತಿಯಾಗಬಾರದು ಎಂದರು.

ಅನ್ನದಾನ ಸೇವಾಕರ್ತರಾದ ಕೆ. ಕೃಷ್ಣ ಸಂಪಿಗೆತ್ತಾಯ, ಹರಿನಾರಾಯಣ ಸಂಪಿಗೆತ್ತಾಯ, ಶ್ರೀನಿವಾಸ ರೈ ಕಾರಂದೂರು, ವಸಂತ ಸಾಲಿಯಾನ್‌ ಕಾಪಿನಡ್ಕ, ಕಾಶಿ ಶೆಟ್ಟಿ ನವಶಕ್ತಿ, ಆರ್‌.ಎಸ್‌. ಲಕೀÒ$¾ ರೆಂಜಾಳ, ಸಂಪತ್‌ ಕುಮಾರ್‌ ಜೈನ್‌ ಪಡಂಗಡಿ, ಬಾಲಕೃಷ್ಣ ಶೆಟ್ಟಿ ಕಾರ್ಯಾಣ ಅವರನ್ನು ಸಮ್ಮಾನಿಸಲಾಯಿತು.

Advertisement

ಸಿನಿಮಾ ನಟ ವಿನೋದ್‌ ಆಳ್ವ, ಉದ್ಯಮಿ ರತ್ನಾಕರ ಜೈನ್‌ ಮಂಗಳೂರು, ಆಡಳಿತ ಮೊಕ್ತೇಸರ ಕೆ. ಕೃಷ್ಣ ಸಂಪಿಗೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅನಿಲ್‌ ಕುಮಾರ್‌ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ್‌ ಗೌಡ, ಕೋಶಾಧಿಕಾರಿ ಸಂತೋಷ್‌ ಹೆಗ್ಡೆ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್‌ ಕುಮಾರ್‌ ಕೆ.ಎಸ್‌. ಸ್ವಾಗತಿಸಿದರು. ಪೆರೋಡಿತ್ತಾಯಕಟ್ಟೆ ಶಾಲಾ ಶಿಕ್ಷಕ ದೇವುದಾಸ ನಾಯಕ್‌ ನಿರ್ವಹಿಸಿದರು. ಜಗದೀಶ್‌ ಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next