Advertisement
ಬೀದರ ಜಿಲ್ಲೆಯಲ್ಲಿ ಸದ್ಯ ಹುಮನಾಬಾದ ಮತ ಕ್ಷೇತ್ರದ ಅಭ್ಯರ್ಥಿಗಳ ಕುತೂಹಲ ಹೆಚ್ಚಾಗಿದೆ. ಹಾಲಿ ಶಾಸಕ ರಾಜೇಖರ ಪಾಟೀಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಕ್ಷೇತ್ರದಲ್ಲಿ ವದಂತಿ ಹಬ್ಬಿತ್ತು. ಶಾಸಕ ಪಾಟೀಲ ಬಿಜೆಪಿ ಸೇರಿದರೆ, ಬೀದರ್ ಜಿಲ್ಲೆಯಲ್ಲಿ ಕಮಲ ಅರಳಿಸುವ ತಂತ್ರಗಾರಿಕೆಯನ್ನು ಬಿಜೆಪಿ ಹೆಣೆದಿತ್ತು ಎಂಬ ಮಾತುಗಳು ಕೂಡ ಕ್ಷೇತ್ರದಲ್ಲಿ ಹಬ್ಬಿದ್ದವು. ಆದರೆ ಇವುಗಳಿಗೆ ಯಾರೂ ಕಿವಿಗೊಡದಂತೆ ಪಾಟೀಲ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದು ಕಾಂಗ್ರೆಸ್ ನಿಂದಲೇ ಸ್ಪರ್ಧೆ ನಡೆಸುವುದಾಗಿ ತಿಳಿಸಿದ್ದು, ಸಧ್ಯ ಬಿಜೆಪಿ ಆಕಾಂಕ್ಷಿಗಳ ಮನದಲ್ಲಿ ತಳಮಳ ಶುರುವಾಗಿದೆ.
ಎಂಬುದನ್ನು ಅರಿತ ಮುಖಂಡರು ಕೆಲವರು ಬೆಂಗಳೂರು ಕಡೆ ಮುಖ ಮಾಡಿದ್ದಾರೆ. ಕೆಲವರು ಯಡಿಯೂರಪ್ಪ ಬೆಂಗಲಿಗರಾದರೆ, ಇನ್ನೂ ಕೆಲವರು ಈಶ್ವರಪ್ಪ, ಸದನಾಂದ ಗೌಡ, ಜಗದೀಶ ಶಟ್ಟರ್ ಅವರನ್ನು ಸಂರ್ಪಕಿಸಿ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಸಹಾಯ ಕೋರುತ್ತಿದ್ದಾರೆ. ಈಗಾಗಲೇ ಕೆಲ ಮುಖಂಡರು ತಮ್ಮ ಟಿಕೆಟ್ ಖಚಿತವಾಗಿದೆ ಎಂದು ಹೇಳಿಕೊಳ್ಳುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಮಾತ್ರ ಮುಂದಾಗಿಲ್ಲ ಯಾಕೆ ಎಂಬ ಪ್ರಶ್ನೆ ಎದರುರಾಗಿದೆ. ಬಿಜೆಪಿಯಲ್ಲಿ “ಮನೆ ಒಂದು ಮೂರು ಬಾಗಿಲು’ ಎಂಬತಾಗಿದೆ. ಮುಂಖಡರ ಮಧ್ಯೆ ಭಿನ್ನಮತ ಎದ್ದು ಕಾಣುತ್ತಿದೆ. ಟಿಕೆಟ್‌ಗಾಗಿ
ಹರಸಾಹಸ ನಡೆಸುತ್ತಿರುವ ಆಕಾಂಕ್ಷಿಗಳು ಇದೀಗ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳ ಮೊರೆ ಹೊಗುತ್ತಿದ್ದಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಎಂದೇ ಗುರುತಿಸಿಕೊಂಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಮಂಠಾಳಕರ್ ಅವರಿಗೆ ಪಕ್ಷದ ಮುಖಂಡರು ಟಿಕೆಟ್ ನೀಡಲಿ ಎಂದು ಅವರ ಅಭಿಮಾನಿ ಬಳಗ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಅಭೀಷೆಕ ಹಾಗೂ ಪೂಜೆ ಸಲ್ಲಿಸಿದರು.
Related Articles
Advertisement