Advertisement

ಗೋಧ್ರಾ ಪ್ರಕರಣ: 16 ವರ್ಷ  ಬಳಿಕ ಆರೋಪಿ ಬಂಧನ

06:00 AM Jan 31, 2018 | Team Udayavani |

ಅಹ್ಮದಾಬಾದ್‌: ಗೋಧ್ರಾ ಹತ್ಯಾಕಾಂಡದ ಆರೋಪಿ ಯನ್ನು ಬರೋಬ್ಬರಿ 16 ವರ್ಷಗಳ ಶೋಧದ ಅನಂತರ ಗುಜರಾತ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Advertisement

ಆರೋಪಿ ಯಾಕೂಬ್‌ ಪಟಾಲಿಯಾ (63) ಗೋಧ್ರಾದ ವಸತಿ ಪ್ರದೇಶವೊಂದರಲ್ಲಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ದೊರಕಿದ ಕೂಡಲೇ ಕಾರ್ಯಪ್ರವೃತ್ತರಾದ ಗಸ್ತು ಕಾರ್ಯಕ್ಕೆ ನಿಯೋಜಿತರಾಗಿದ್ದ ಗುಜರಾತ್‌ ಪೊಲೀಸರ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ವಶಕ್ಕೆ ಯಾಕೂಬ್‌ನನ್ನು ಹಸ್ತಾಂತರಿ ಸಲಾಗುವುದು ಎಂದು ಗುಜರಾತ್‌ ಪೊಲೀಸರು ಹೇಳಿದ್ದಾರೆ. ಆರೋಪಿ ಯಾಕೂಬ್‌ನ ಸಹೋದರರು, ಸಹ ಆರೋಪಿಗಳಾದ ಅಯ್ಯೂಬ್‌ ಪಟಾಲಿಯಾ ಮತ್ತು ಖಾದಿರ್‌ನನ್ನು 2015ರಲ್ಲಿ ಬಂಧಿಸಲಾಗಿತ್ತು. ಖಾದಿರ್‌ ಜೈಲಿನಲ್ಲೇ ಮೃತಪಟ್ಟಿದ್ದ. ಅಯ್ಯೂಬ್‌ ವಡೋದರಾ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಉತ್ತರ ಪ್ರದೇಶದ  ಅಯೋಧ್ಯೆಯಲ್ಲಿ 2002ರ ಫೆ.27ರಂದು ಏರ್ಪಡಿಸ ಲಾಗಿದ್ದ ಪೂರ್ಣಾಹುತಿ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಲು ಗುಜರಾತ್‌ನಿಂದ ವಿಹಿಂಪ ಕಾರ್ಯಕರ್ತರು ಮತ್ತು ಕರಸೇವಕರು ತೆರಳಿದ್ದರು. ಅವರು ಪ್ರಯಾಣಿಸುತ್ತಿದ್ದ ಸಾಬರಮತಿ ರೈಲಿಗೆ ಗುಂಪೊಂದು ಮುತ್ತಿಗೆ ಹಾಕಿದ್ದಲ್ಲದೆ, 4 ಬೋಗಿಗಳಿಗೆ ಬೆಂಕಿ ಹಚ್ಚಿತ್ತು. ಈ ವೇಳೆ 27 ಮಹಿಳೆ ಯರು, 10 ಮಕ್ಕಳು ಸಹಿತ 59 ಮಂದಿ ಸಜೀವದಹನವಾಗಿ, 48 ಪ್ರಯಾಣಿಕರು ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next