Advertisement
ಬಾದನಹಟ್ಟಿ ಗ್ರಾಮದಲ್ಲಿ ಜರುಗುವ ಊರು ದೇವರಿಗೆ ಕುರುಗೋಡು, ಬಳ್ಳಾರಿ, ಸಿರುಗುಪ್ಪ, ಹೊಸಪೇಟೆ, ಸಂಡೂರು, ಕಂಪ್ಲಿ, ಇತರೆ ತಾಲೂಕು ಮತ್ತು ಜಿಲ್ಲೆ ಗಳಿಂದ ಸಾವಿರಾರು ಸಂಖ್ಯೆ ಯಲ್ಲಿ ಜನರು ಬಂದು ಭಾಗವಹಿಸುತ್ತಿದ್ದು ಇದಕ್ಕೆ ಗ್ರಾಪಂ ಆಡಳಿತ ಮಾತ್ರ ಸೂಕ್ತ ವ್ಯವಸ್ಥೆ ಒದಗಿಸುವಲ್ಲಿ ಹಿಂದೇಟು ಹಾಕಿದೆ. ಗ್ರಾಪಂ ಅಧಿಕಾರಿಗಳು ಮಾತ್ರ ಸಾರ್ವಜನಿಕರು ಪ್ರತಿಯೊಂದು ಏನೇ ಪ್ರಶ್ನೆ ಕೇಳಿದರು ಉಡಾಫೆ ಉತ್ತರ ನೀಡುತ್ತಾರೆ.
Related Articles
Advertisement
ಗ್ರಾಮದಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ಕಲುಷಿತ ವಾತಾವರಣ ಸೃಷ್ಟಿಯಾಗಿದೆ. ತ್ಯಾಜ್ಯ, ನೀರು ಹರಿಯದೆ ಮಡುಗಟ್ಟಿನಿಂತಿದ್ದು, ರಸ್ತೆಯ ಮೇಲೆ ಕೊಳೆತು ನಿಂತಿರುವ ಕೊಳಚೆ ನೀರಿನಿಂದ ದುರ್ವಾಸನೆ ಬೀರುತ್ತಿದೆ. ಸಾಂಕ್ರಾಮಿಕ ರೋಗದ ಭೀತಿ ತಲೆದೋರಿದೆ. ಆದರೆ ಸ್ಥಳೀಯ ಆಡಳಿತ ಮಾತ್ರ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ.ಬಾದನಹಟ್ಟಿ ಗ್ರಾಪಂನ ವಿವಿಧ ವಾಡ್ ಗಳಿಗೆ ತೆರಳುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ರಸ್ತೆ ತುಂಬೆಲ್ಲಾ ನಿಂತಿದೆ.
ಸೊಳ್ಳೆ ಕಾಟ ಹೆಚ್ಚಳನಿತ್ಯ ನೂರಾರು ಮಂದಿ ಓಡಾಡುವ ಈ ರಸ್ತೆಯಲ್ಲಿ ಕೊಳಚೆ ನೀರು ತುಂಬಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿದೆ ನಿರ್ಲಕ್ಷ್ಯ ತೋರಿದ್ದಾರೆ. ಚರಂಡಿ ಸ್ವಚ್ಛಗೊಳಿಸದೆ ದುರ್ವಾಸನೆ ಇದ್ದು ಸೊಳ್ಳೆ ಕಾಟ ಹೆಚ್ಚಾಗಿದೆ. ಸೊಳ್ಳೆ ಕಾಟಕ್ಕೆ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರ ಬರಲು ಜನ ಹಿಂದೇಟು ಹಾಕುತ್ತಾರೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುವ ಭೀತಿ ಜನರಲ್ಲಿ ಎದುರಾಗಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ತುಂಬಿದ್ದು ಸ್ವಚ್ಛ ಭಾರತ ಅಭಯಾನದ ಅಡಿ ಗ್ರಾಮೀಣ ಭಾಗದ ಪ್ರತಿಗ್ರಾಮಗಳಲ್ಲೂ ಕಸ ವಿಲೇವಾರಿಗೆ ಪಂಚಾಯಿತಿಗಳು ಸೂಕ್ತ ಕ್ರಮ ಕೈಗೊಂಡಿದೆ. ಆದರೆ ಬಾದನಹಟ್ಟಿ ಗ್ರಾಪಂ ಯಲ್ಲಿ ಕಸ ಸಂಗ್ರಹಿಸುತ್ತಿದ್ದರೂ ರಸ್ತೆ ಬದಿಗಳಲ್ಲಿ ಕಸ ಸುರಿಯುವ ಪ್ರವೃತ್ತಿ ಮಾತ್ರ ಕಡಿಮೆಯಾಗಿಲ್ಲ. ರಸ್ತೆ ಬದಿ ಕಸ ಹಾಕುವವರಿಗೆ ನೋಟಿಸ್ ನೀಡದೆ ಕ್ರಮ ಕೈಗೊಳ್ಳದೆ ಕಾನೂನುಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ತ್ಯಾಜ್ಯ ಕೊಡುವುದೇ ಇಲ್ಲ, ಮತ್ತಷ್ಟು ಮಂದಿ ಕೊಡುತ್ತಿದ್ದರೂ ಮಧ್ಯೆಮಧ್ಯೆ ವಾಹನವೇ ಬರುವುದಿಲ್ಲ ಎನ್ನುವ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇನ್ನೊಂದೆಡೆ ಕಸದ ವಾಹನ ಬೆಳಗ್ಗೆಯೋ, ಮಧ್ಯಾಹ್ನವೋ, ಸಂಜೆಯೋ ಯಾವಾಗ ಬರುತ್ತದೆ ಎನ್ನುವುದು ಗೊತ್ತಾಗುವುದಿಲ್ಲ ಎಂದು ಜನರು ಕಾದು ಕಾದು ರಸ್ತೆಬದಿಯನ್ನೇ ತ್ಯಾಜ್ಯ ರಾಶಿ ಮಾಡಿಬಿಟ್ಟಿದ್ದಾರೆ. ಹೀಗಾಗಿ ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಕಸ ಸುರಿಯುತ್ತಿದ್ದಾರೆ ಎಂಬ ದೂರಿದೆ. ಒಟ್ಟಾರೆ ಒಂದೆಡೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರಿಗೆ ತ್ಯಾಜ್ಯದಿಂದಾಗುವ ದುಷ್ಪರಿಣಾಮಗಳ ಅರಿವಿಲ್ಲದಾಗಿದೆ. ಇದರ ಸ್ಥಿತಿ ತೋರಿಸಿದರೂ ಊರಿನ ಹದಗೆಟ್ಟ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಕೂಡ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಊರಿನಲ್ಲಿ ರೋಗ ಉಲ್ಬಣಿಸಿ ಸಾವು ಸಂಭವಿಸಿದರೆ ಅದಕ್ಕೆ ಯಾರು ಹೊಣೆ, ಎಂಬುವುದು ಸಾರ್ವಜನಿಕರ ಪ್ರಶ್ನೆ ಯಾಗಿದೆ. ಕಸ ಬಿಸಾಡುವ ಜನರಿಗೆ ಜಾಗೃತಿ ಮೂಡಿಸುವಲ್ಲಿ ಗ್ರಾಪಂ ವಿಫಲವಾಗಿದೆ.