Advertisement

ಭಕ್ತರ ಹೃದಯದಲ್ಲಿಯೇ ದೇವರಿದ್ದಾನೆ : ಸಾದ್ವಿ ಮಾತಾನಂದಮಯೀ

07:11 PM Mar 27, 2023 | Team Udayavani |

ಬೆಳ್ಮಣ್‌: ಶ್ರದ್ಧೆಯಿಂದ ಮಾಡಿದ ಪೂಜೆ , ಸೇವೆಗಳು ಫಲಪ್ರದವಾಗಿರುತ್ತವೆ, ಭಕ್ತರ ಹೃದಯದಲ್ಲಿಯೇ ದೇವರಿದ್ದಾನೆ ಅಲ್ಲದೆ ಅಚಲಭಕ್ತಿಯಿಂದ ಭಗವಂತನನ್ನು ಪ್ರಾರ್ಥಿಸಿದರೆ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಂ ಇಲ್ಲಿನ ಸಾದ್ವಿ ಮಾತಾನಂದಮಯೀ ಹೇಳಿದರು.

Advertisement

ಅವರು ರವಿವಾರ ಶ್ರೀಕ್ಷೇತ್ರ ಅಡಪಾಡಿ ಶ್ರೀಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರೀ ದೇವಳದ ವಾಯುವ್ಯ ಭಾಗದ ಪುರಾತನ ಆಲಡೆ ಸಾನಿಧ್ಯಗಳ ಪ್ರತಿಷ್ಠಾಪನಾಂಗ ಶ್ರೀಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವ ಹಾಗೂ ಸಹಸ್ರ ಚಂಡಿಕಾ ಮಹಾಯಾಗದ ಸಂದರ್ಭ ”ಮಾತೃ ಸಂಗಮ” ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ಪ್ರೀತಿ ಇದ್ದಲ್ಲಿ ಭಗವಂತನ ಸಾನಿಧ್ಯವಿರುತ್ತದೆ, ಭಕ್ತಿ ಇದ್ದಾಗ ಭಗವಂತನ ಅನುಗ್ರಹ ಪ್ರಾಪ್ತವಾಗುತ್ತದೆ ಎಂದ ಅವರು, ದುಷ್ಟರ ಸಂಹಾರ ಶಿಷ್ಟರ ಏಳಿಗೆಗಾಗಿ ದೇವಿಯ ಅವತಾರ ಆಗಿದ್ದು, ಇಲ್ಲಿ ಮಾತೃ ಸಂಗಮದ ಮೂಲಕ ದೇವಿಯ ಆರಾಧನೆ ನಡೆಯುತ್ತಿದೆ ಎಂದು ಹರ್ಷ ವ್ಯಕ್ತ ಪಡಿಸಿದರು. ಮಾತೆಯಂದಿರಿಗೆ ಗೌರವ ಇದೆಯೋ ಅಲ್ಲಿ ದೇವತೆಗಳು ಇರುತ್ತಾರೆ. ನಮ್ಮ ಪೀಳಿಗೆಗೆ ಭದ್ರವಾದ ತಳಹದಿ ನಿರ್ಮಾಣ ಮಾಡುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ನಮ್ಮತನ ಉಳಿಸಿ ಸಂಸ್ಕೃತಿ, ಪರಂಪರೆಯ ಸಂಸ್ಕಾರವನ್ನು ಮಕ್ಕಳಲ್ಲಿ ಮಮತೆಯಿಂದ ಜಾಗ್ರತಿ ಮಾಡುವ ಗುರುತರ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದ ನಿಕಟಪೂರ್ವ ಸದಸ್ಯೆ ಶ್ಯಾಮಲಾ ಕುಂದರ್‌ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಖರ ಬಾಲವಾಗ್ಮಿ ಹಾರಿಕಾ ಮಂಜುನಾಥ್‌ ಬೆಂಗಳೂರು, ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ರೂಪಾ ಎಂ, ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ,ಅಖೀಲಾ ವಾಸುದೇವ, ಕೆ.ಎಂ.ಸಿ ಎಸೋಸಿಯೇಟ್‌ ಪ್ರೊಫೆಸರ್‌ ಡಾ.ಅಂಜಲಿ ಸುನಿಲ್‌, ಡಾ,ರಾಜೇಶ್ವರೀ ಕೊರಡ್ಕಲ್‌ ಮೂಡುಬೆಳ್ಳೆ, ಡಾ.ಅಂಜಲಿ ಬೋರ್ಕಾರ್‌ ಮೂಡುಬೆಳ್ಳೆ, ಮಣಿಪಾಲ ಆರ್‌ಎಸ್‌ಬಿ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ಎಸ್‌.ನಾಯಕ್‌ ಅಂಬಲಪಾಡಿ, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ಲು, ತಾ.ಪಂ.ಮಾಜಿ ಸದಸ್ಯೆ ವಿದ್ಯಾ ಎಂ.ಸಾಲಿಯಾನ್‌ ಪಳ್ಳಿ ಮುಖ್ಯ ಅತಿಥಿಗಳಾಗಿದ್ದರು.

ಅಡಪಾಡಿ ಕ್ಷೇತ್ರದ ಸುಮಂಗಲ ಪುಂಡಲೀಕ ನಾಯಕ್‌ ಅತಿಥಿಗಳನ್ನು ಗೌರವಿಸಿದರು. ಮಲ್ಲಿಕಾ ರೂಪೇಶ್‌ ಸ್ವಾಗತಿಸಿದರು. ಸಂಗೀತಾ ಕುಲಾಲ್‌ ನಿರೂಪಿಸಿದರು. ಅಕ್ಷಯಾ ಅರುಣ್‌ ಧನ್ಯವಾದವಿತ್ತರು.

Advertisement

ಬಾಕ್ಸ್‌ಗೆ: ಪ್ರಖರ ಬಾಲವಾಗ್ಮಿ ಹಾರಿಕಾ ಮಂಜುನಾಥ್‌ ಬೆಂಗಳೂರು ಇವರು ಮಾತನಾಡಿ, ನಮ್ಮ ದೇಶ ಮಾತೃ ಸಂಸ್ಕೃತಿಯ ತವರಾಗಿದೆ, ನಮ್ಮ ಸಂಸ್ಕೃತಿ ಹೆಣ್ಣನ್ನು ಅಡುಗೆ ಮನೆಗೆ ಸೀಮಿತಗೊಳಿಸಿಲ್ಲ ಎಂದರಲ್ಲದೆ ಭೂಮಿತಾಯಿ ಲಕ್ಷ್ಮೀ ಸ್ವರೂಪಿ, ಎಲ್ಲಾ ಶಕ್ತಿಸಾನಿಧ್ಯಗಳು ಮಾತೃಶಕ್ತಿಯ ಸ್ವರೂಪವಾಗಿದ್ದು ನಮ್ಮ ಸಂಸ್ಕೃತಿ ಕಾಟಾಚಾರದ ಸೊತ್ತಲ್ಲ. ವೇದಗಳನ್ನು ಕೊಟ್ಟ ಪರಂಪರೆ ನಮ್ಮದು. ದೇಶದ ಧರ್ಮ ಸಂಸ್ಕೃತಿಯ ಮೇಲೆ ಧಾಳಿಯಾದಾಗ ರಕ್ಷಣೆಯ ನೇತೃತ್ವ ವಹಿಸಿ ಹೋರಾಡಿದ ಅಬ್ಬಕ್ಕ, ಚೆನ್ನಮ್ಮ, ಓಬವ್ವ, ಬೆಳವಡಿ ಮಲ್ಲಮ್ಮ ಮೊದಲಾದವರ ಪರಂಪರೆ ನಮ್ಮದು. ತಾಯಂದಿರು ಮಕ್ಕಳ ಜೀವನದಲ್ಲಿ ಧರ್ಮವನ್ನು, ಧಾರ್ಮಿಕತೆಯನ್ನು ಜಾಗ್ರತಿಗೊಳಿಸುವ ಮೂಲಕ ಉತ್ತಮ ಸಂಸ್ಕಾರವನ್ನು ನೀಡುವಲ್ಲಿ ಪ್ರಧಾನ ಪಾತ್ರದಾರಿಗಳು. ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳು, ಲವ್‌ ಜಿಹಾದ್‌ ಪ್ರಕರಣಗಳನ್ನು ಮೆಟ್ಟಿನಿಲ್ಲವಂತಹ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಾತೃಶಕ್ತಿಯ ಪಾತ್ರ ಮಹತ್ವದ್ದಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next