Advertisement

ಭಗವಂತ ಎಲ್ಲೆಡೆ ಇದ್ದಾನೆ, ಭಗವಂತ ಇರದ ಜಾಗವಿಲ್ಲ : ಪೇಜಾವರ ಶ್ರೀಗಳು

09:46 PM Nov 24, 2022 | Vishnudas Patil |

ತೀರ್ಥಹಳ್ಳಿ: ಗ್ರಾಮಕ್ಕೆ, ನಾಡಿಗೆ, ದೇಶಕ್ಕೆ ಉಳಿತಾಗಲು ಭಗವಂತನ ಆರಾಧನೆ ಮುಖ್ಯ. ಪ್ರತಿಯೊಬ್ಬರು ಧರ್ಮದ, ದೇವರ ಆರಾಧನೆ ಯೊಂದಿಗೆ ಏಕತೆ, ಒಗ್ಗಟ್ಟಿನಿಂದ ಸಾಗಿದರೆ ದೇವಾಲಯ ನಿರ್ಮಾಣ ಸಾಧ್ಯ ಎಂದು ಉಡುಪಿಯ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಆಶೀರ್ವದಿಸಿದರು.

Advertisement

ತಾಲೂಕಿನ ಹೊದಲ ಅರಳಾಪುರ ಗ್ರಾಮದ ಪುರಾಣ ಪ್ರಸಿದ್ದ ಶ್ರೀ ಶಂಕರೆಶ್ವರ, ಶ್ರೀ ಲಕ್ಷ್ಮೀನಾರಾಯಣ, ಮತ್ತು ಶ್ರೀಹನುಮಂತ ದೇವಾಲಯದ ಜೀರ್ಣೋದ್ದಾರ ಸಮಾರಂಭದಲ್ಲಿ ಶಿಲಾನ್ಯಾಸ, ಶಂಕುಸ್ಥಾಪನೆಯೊಂದಿಗೆ ಅಡಿಗಲ್ಲಿಟ್ಟು ಮಾತನಾಡಿದ ಅವರು ಯಾವುದೇ ಕೆಲಸ ಯಶಸ್ವಿಯಾಗಬೇಕಾದರೆ ನಮ್ಮ ಪ್ರಯತ್ನದ ಶ್ರಮದೊಂದಿಗೆ ದೇವರ ಅನುಗ್ರಹ ಮುಖ್ಯ, ಭಗವಂತ ಎಲ್ಲೆಡೆ ಇದ್ದಾನೆ, ಇರದ ಜಾಗವಿಲ್ಲ, ಭಗವಂತನನ್ನು ಮಂದಿರದಲ್ಲಿ ಪೂಜಿಸಿದರೆ ಗ್ರಾಮದ ಪ್ರತಿಯೊಬ್ಬರಿಗೂ ಉಳಿತಾಗುತ್ತದೆ ಎಂದರು.

ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಮಾತನಾಡಿ, ಪೇಜಾವರದ ಶ್ರೀ ಗಳ ಆಶೀರ್ವದದಿಂದ ನಾವು ಮಾಡುವ ಕೆಲಸಗಳು ಯಶಸ್ವಿಯಾಗುತ್ತದೆ. ಇಂದು ಧರ್ಮದ ಹೆಸರಿನಲ್ಲಿ ಮಾನವ ವಿರೋಧಿ ಕೃತ್ಯಗಳು ನೆಡೆಯುತ್ತಿದೆ. ಸಮಾಜದಲ್ಲಿಂದು ಆಘಾತಕಾರಿ ಬೆಳವಣಿಗೆ ಯಾಗಬಾರದು ಎಂದರು. ಕರಿಮನೆಯ ಈ ದೇವಾಲಯಕ್ಕೂ ನನಗೂ ಅವಿನಾಭಾವ ಸಂಭಂದವಿದೆ. ಹಿಂದೆ ನನ್ನ ಗುರುಗಳಾದ ದಿ.ತಾರಗೊಳ್ಳಿ ನಾಗರಾಜರಾಯರು ಈ ದೇವಾಲಯದ ಕಟ್ಟಡವೊಂದನ್ನು ನಿರ್ಮಿಸುವಾಗ ನಾನು ಬಂದು ಹೋಗುತ್ತಿದ್ದೆ. ಈ ದೇವಾಲಯದ ಮುಂದಿನ ಅಭಿವೃದ್ಧಿಗೆ ಸರ್ಕಾರದ ಕಡೆಯಿಂದ ಹೆಚ್ಚಿನ ಅನುದಾನ ನೀಡುವಾಗಿ ಭರವಸೆ ನೀಡಿದರು.

ಅರ್ಚಕ ಪ್ರಭಾಕರ್ ಭಟ್ ಕರಿಮನೆಯವರ ವೇದಘೋಷದೊಂದಿಗೆ ಕಾರ್ಯಕ್ರಮ ನೆರವೇರಿತು. ಶಿವಕುಮಾರ್ ಕರಿಮನೆ ಸ್ವಾಗತಿಸಿ, ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next