Advertisement

ಗಣಪತಿಗೇ ಅಗ್ರಪೂಜೆ

08:27 AM Sep 10, 2021 | Team Udayavani |

“ತತ್ಪುರುಷಾಯ ವಿದ್ಯ ಹೇ – ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್‌’ (ಗಣಪತಿ ಗಾಯಿತ್ರಿ). ಮಾನವರಲ್ಲಿ ಎಲ್ಲರೂ ಒಂದೇ ಸ್ವಭಾವದವರಾಗಲೀ, ಒಂದೇ ದೃಷ್ಟಿಕೋನ ಉಳ್ಳವರಾಗಲೀ ಇಲ್ಲ. ವೈವಿಧ್ಯತೆಯು ಪ್ರಕೃತಿಯ ಸಹಜತೆ.

Advertisement

ಹೀಗಾಗಿ ಹಿಂದೂ ಧರ್ಮದಲ್ಲಿ ವಿವಿಧ ಪಂಥಗಳು, ವಿವಿಧ ಮತಗಳು ಉಂಟಾಗಿರುವು­ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಎಲ್ಲ ಪಂಥಗಳ, ಮತಗಳ ಗುರಿಯೂ ಒಂದೇ. ಅದು ಸತ್ಯ ಸಾಕ್ಷಾತ್ಕಾರ. ಒಂದೇ ಗುರಿಯನ್ನು ಸೇರಲು ಹಲವು ಮಾರ್ಗಗಳಿ­ರುವಂತೆ, ಒಂದೇ ಸತ್ಯ ವಸ್ತುವನ್ನು ಅರಿಯಲು ವಿವಿಧ ಮತ, ಪಂಥಗಳೂ ಹುಟ್ಟಿದವು. ಈ ಒಂದೊಂದು ಪಂಥದವರೂ ಆ ಪರಾತ್ಪರ ವಸ್ತುವನ್ನು, ಭಗವಂತನನ್ನು ಒಂದೊಂದು ಹೆಸರಿನಿಂದ ಕರೆದು ಉಪಾಸನೆ ಮಾಡತೊಡಗಿದರು.

ಹೀಗಾಗಿ ಹಲಕೆಲವು ಕ್ಷುದ್ರದೇವತೆ­ಗಳ ಪೂಜೋಪಾಸನೆಗಳೂ ಹಿಂದೂ ಸಮಾಜದಲ್ಲಿ ರೂಢಿಗೆ ಬಂದವು. ಅಗ ಇವುಗಳನ್ನೆಲ್ಲಾ ಖಂಡಿಸಿ “ಗಣಪತಿ, ಸೂರ್ಯ, ಶಿವ, ವಿಷ್ಣು, ಶಕ್ತಿ, ಸುಬ್ರಹ್ಮಣ್ಯ’ ಎಂಬ ಆರು ದೇವರುಗಳು ಮಾತ್ರ ಪೂಜಾಯೋಗ್ಯ­ರೆಂಬುದಾಗಿ ಶ್ರೀಶಂಕರ ಭಗವತ್ಪಾದರು ಒಂದು ನಿರ್ಣಯವನ್ನು ಪ್ರಚಾರಪಡಿಸಿದರು. ಅಂದಿನಿಂದ ಈ ಆರು ದೇವರುಗಳ ಪೂಜಾ­ಪಂಥವು ರೂಢಿಯಲ್ಲಿ ಬಂದಿದೆ. ಆದರೆ, ಜನಜೀವನದಲ್ಲಿ ಗರ್ಭಾದಾನ ಮೊದಲುಗೊಂಡು ಪೂಂಸವನ, ಸೀಮಂತೋ­ನ್ನಯನ, ಜಾತಕರ್ಮ, ನಾಮಕರಣ, ನಿಷðಮಣ, ಅನ್ನಪ್ರಾಶನ, ಚೂಡಾಕರ್ಮ, ಶರ್ಣವೇಧ, ವಿದ್ಯಾರಂಭ, ಉಪನಯನ, ವೇದಾರಂಭ, ಕೇಶಾಂತ, ಸಮಾವರ್ತನ, ವಿವಾಹ (ಅಂತ್ಯೇಷ್ಟಿ)ದ ವರೆಗಿನ ಎಲ್ಲಾ ಷೋಡಶ ಸಂಸ್ಕಾರಗಳಲ್ಲಿ ಮತ್ತು ವ್ಯಾವಹಾರಿಕ­ವಾದ ಕೆರೆ, ಭಾವಿ, ತಟಾಕಗಳ ನಿರ್ಮಾಣ, ಗೃಹನಿರ್ಮಾಣ ಮತ್ತು ಪ್ರವೇಶ ಸಕಲ ಕಲೆ ಮತ್ತು ಸಾಹಿತ್ಯಗಳ ನಿರ್ಮಾಣ ಮತ್ತು ಅದರ ಪ್ರದರ್ಶನ ಕಾಲದಲ್ಲಿ ಅಲ್ಲದೆ ಬೇರೆ ಬೇರೆ ದೇವದೇವಿಯರ ಪೂಜಾನುಷ್ಠಾನದಲ್ಲಿ ಕೂಡ ಶಕ್ತಿ, ಶಿವ, ವಿಷ್ಣು ಮೊದಲಾದ ದೇವತೆಗಳಿಗಿಂತಲೂ ಮೊದಲು ಅಗ್ರಪೂಜೆ ಸಲ್ಲುವುದು ಗಣಪತಿಗೇ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next