Advertisement
ಸಭಾ ಕಾರ್ಯಕ್ರಮವನ್ನು ಯೋಗಾಚಾರ್ಯ ಶ್ರೀದೇವ ಬಾಬಾ ಅವರು ಉದ್ಘಾಟಿಸಿ, ಗೋವು ರಾಷ್ಟ್ರದ ಸಂಪತ್ತು. ವಿಶ್ವಕ್ಕೇ ಅವಳು ಮಾತೆ. ಎಲ್ಲ ಅನಾರೋಗ್ಯಗಳಿಗೆ ಉತ್ತಮವಾದ ಔಷಧಿ ಭಾರತೀಯ ಗೋವುಗಳು ಕೊಡುವ ಹಾಲು ಎಂಬುದಾಗಿ ಗ್ರಂಥದಲ್ಲಿ ತಿಳಿಸಿದ್ದಾರೆ. ಅತ್ಯಂತ ಶ್ರೇಷ್ಠವಾದ ಔಷಧ ಗೋರೋಚನ. ಇದು ಕಪಿಲ ಗೋವಿನ ಕೊಂಬಿನಲ್ಲಿದೆ. ಇದನ್ನು ತೇದು ಪ್ರತೀ ಮೂವತ್ತು ನಿಮಿಷಕ್ಕೊಮ್ಮೆ ನಾಲಿಗೆಗೆ ಸವರಿದಾಗ ಸಾವಿನ ಅಂಚಿನಲ್ಲಿದ್ದ ವ್ಯಕ್ತಿಯ ಪ್ರಾಣ ದೇಹಬಿಟ್ಟು ಹೋಗದಂತೆ ತಡೆಯಲ್ಪಡುತ್ತದೆ. ಗೋಘೃತ ಪಂಚಗವ್ಯ ಔಷಧಿ ಅನೇಕ ರೋಗಗಳಿಗೆ ರಾಮಬಾಣ. ಪ್ರತಿಯೊಂದು ಮನೆಯವರು ದೇಶೀಯ ಗೋವು ಸಾಕುವತ್ತ ಮನಸ್ಸು ಮಾಡಬೇಕೆಂದರು.
ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅವರು, ಗೋವಿನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅದನ್ನು ಸಾಕುವುದರ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಗೋವು ನಮ್ಮ ಕುಟುಂಬ ಜೀವನದ ಸದಸ್ಯನಾಗಬೇಕೆಂದರು. ನಿವೃತ್ತ ಪ್ರಾಂಶುಪಾಲ ಪ್ರೊ| ಬಾಲಚಂದ್ರ ಗೌಡ ಅವರು ಮಾತನಾಡಿ, ಹಿಂದೆ ಹೆಣ್ಣು ಒಪ್ಪಿಸಿಕೊಡುವಾಗ ದನದ ಕರುವನ್ನು ಜತೆಯಾಗಿ ಕಳುಹಿಸಿಕೊಡುತ್ತಿದ್ದರು. ಈ ಸಂಪ್ರದಾಯವನ್ನು ಮತ್ತೆ ಮುಂದುವರಿಸಿದರೆ ಗೋಸಂತತಿ ವೃದ್ಧಿಯಾಗಬಹುದು ಎಂದರು.
Related Articles
ರವಿಪ್ರಕಾಶ್ ಅಟೂÉರು ಸ್ವಾಗತಿಸಿ, ಡಾ|ಅನುಪಮಾ ವಂದಿಸಿದರು. ಡಾ|ಶಶಿಧರ ಹಾಸನಡ್ಕ ನಿರೂಪಿಸಿದರು. ಈ ಸಂದರ್ಭದಲ್ಲಿ ದೇಶಿಯ ಗೋವುಗಳನ್ನು ಆಸಕ್ತಿಯಿಂದ ಸಾಕುತ್ತಿರುವವರನ್ನು ಗೌರವಿಸಲಾಯಿತು.
Advertisement
ಅನಂತರ ಕೆ. ವಿ.ರಮಣ್ ಮತ್ತು ಡಾ| ಎಂ.ಪ್ರಭಾಕರ ಜೋಶಿ ರಚಿಸಿದ ಬಹುಮಾಧ್ಯಮ ಬಳಕೆಯ ಅದ್ದೂರಿಯ ದ್ವಿ ಭಾಷಾ ನೃತ್ಯ ನಾಟಕ ವಿಶ್ವಮಾತಾ ಗೋಮಾತಾ ಪ್ರದರ್ಶನಗೊಂಡಿತು.
ಜಾಗೃತಿಕಲಾವಿದ ಕೆ.ವಿ. ರಮಣ್ ಅವರು ಮಾತನಾಡಿ, ವಿಶ್ವಮಾತಾ-ಗೋಮಾತಾ ನೃತ್ಯ ನಾಟಕ ನಿರ್ಮಾಣವಾಗಿದ್ದು, ದೇಶ ವಿದೇಶಗಳ ಪ್ರದರ್ಶನದ ಮೂಲಕ ಗೋಪ್ರಜ್ಞೆಯ ಜಾಗೃತಿ ಮೂಡಿಸಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ ಎಂದು ವಿವರಿಸಿದರು.