Advertisement

ತಪ್ಪಿದ ಭಾರೀ ಅನಾಹುತ: ಆಗಸದಲ್ಲೇ ಗೋಏರ್‌ ವಿಮಾನದ ರೆಕ್ಕೆಗೆ ಬೆಂಕಿ!

09:47 AM Feb 10, 2017 | |

ಹೊಸದಿಲ್ಲಿ: ಭಾರೀ ವಿಮಾನ ದುರಂತವೊಂದು ಅದೃಷ್ಟವಷಾತ್‌ ತಪ್ಪಿ ಹೋಗಿದ್ದು, ಇಲ್ಲಿನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿದ್ದ ವಿಮಾನದ ರೆಕ್ಕೆಗೆ ಆಗಸದಲ್ಲೇ  ಬೆಂಕಿ ಹೊತ್ತಿಕೊಂಡ ಆತಂಕಕಾರಿ ಘಟನೆ ಗುರುವಾರ ಸಂಜೆ ನಡೆದಿದೆ. 

Advertisement

ರೆಕ್ಕೆಯಲ್ಲಿ ಬೆಂಕಿ ನೋಡಿದ  ಕೂಡಲೇ ಸಿಬಂದಿಗಳಿಗೆ ವಿಚಾರ ತಿಳಿಸಿದ್ದು, ತಕ್ಷಣವೇ ವಿಮಾನದ ಪೈಲಟ್‌ ಸವಾಲನ್ನು ಸ್ವೀಕರಿಸಿ  ವಿಮಾನವನ್ನು ಲ್ಯಾಂಡ್‌ ಮಾಡುವಲ್ಲಿ ಯಶಸ್ವಿಯಾದರು.  ತಕ್ಷಣವೇ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಈ ಭಯಾನಕ ಅನುಭವವನ್ನು ಸೌರಭ್‌ ಟೆಂಡನ್‌ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ನಾನು ವಿಮಾನದ ಪ್ರಯಾಣಿಕರಲ್ಲಿ ಒಬ್ಬನಾಗಿದ್ದೆ. ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಪ್ರಯಾಣಿಕರು ಬೆಂಕಿ,ಬೆಂಕಿ ಎಂದು ಕೂಗಿದ್ದು  ನಾನು ಎಡ ಬದಿಯ ರೆಕ್ಕೆಯನ್ನು ನೋಡಿದಾಗ ಬೆಂಕಿ ಉರಿಯುತ್ತಿತ್ತು. ಸುಮಾರು 30 ಸೆಕೆಂಡುಗಳ ಕಾಲ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಪೈಲೆಟ್‌ ವಿಮಾನದ ಇಂಜಿನ್‌ ಆಫ್ ಮಾಡಿ 30 ನಿಮಿಷಗಳ ಒಳಗಾಗಿ ಲ್ಯಾಂಡ್‌ ಮಾಡುವಲ್ಲಿ ಸಫ‌ಲರಾದರು.ನಿಜವಾಗಿಯೂ ಅವರೊಬ್ಬ ಹೀರೋ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next