Advertisement

ಅಮೇರಿಕಾದ ಟೆಕ್ಸಾಸ್‍ನಲ್ಲಿ ಗೋವಾ ಮೂಲದ ಯುವಕನ ಗುಂಡಿಕ್ಕಿ ಹತ್ಯೆ

05:43 PM Mar 21, 2022 | Team Udayavani |

ಪಣಜಿ: ಅಮೇರಿಕಾದ ಟೆಕ್ಸಾಸ್‍ನಲ್ಲಿ ಗೋವಾದ ಮಡಗಾಂವ್ ಮೂಲದ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾದ ಘಟನೆ ಭಾನುವಾರ ನಡೆದಿದೆ.

Advertisement

ಜಾನ್ ಡಾಯಸ್ (27) ಹತ್ಯೆಯಾದ ಯುವಕ.

ಜಾನ್ ಡಾಯಸ್ ಈತನು ಫುಟ್‍ಬಾಲ್ ಪಟುವಾಗಿದ್ದ. ದಕ್ಷಿಣ ಗೋವಾದ ಚಾಂದರ್ ಮತ್ತು ಗಿರ್ಡೋಲಿ ಕ್ಲಬ್‍ಗಳಿಗೆ ಗೋಲ್‍ಕೀಪರ್ ಆಗಿದ್ದರು. ಆದರೆ ಉದ್ಯೋಗದ ನಿಮಿತ್ತ ಇವರು ಕಳೆದ ಮೂರು ವರ್ಷಗಳ ಹಿಂದಷ್ಟೆ ಅಮೇರಿಕಕ್ಕೆ ಹೋಗಿದ್ದರು. ಜಾನ್ ಸಾವಿನ ಸುದ್ಧಿ ಚಾಂದರ್ ಗ್ರಾಮದ ಜನರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಅಮೇರಿಕದಲ್ಲಿ ಅಂಗಡಿಗೆ ಕಳ್ಳತನ ಮಾಡಲು ಬಂದಿದ್ದ ಮುಸುಕುಧಾರಿಯೊಬ್ಬ ಜಾನ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗುಂಡಿನ ದಾಳಿ ನಡೆದ ಕೆಲವೇ ಹೊತ್ತಿನಲ್ಲಿ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟುಹೊತ್ತಿನಲ್ಲಿ ದಾಳಿಕೋರ ಪರಾರಿಯಾಗಿದ್ದ. ದಾಳಿಯ ಕುರಿತಂತೆ ಪೋಲಿಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಆರೋಪಿಯ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next