Advertisement

ಗೋವಾ: ದೇಶೀಯ ಪ್ರವಾಸಿಗರನ್ನು ಅವಲಂಬಿಸುವಂತಾದ ಪ್ರವಾಸೋದ್ಯಮ

05:02 PM Sep 08, 2022 | Team Udayavani |

ಪಣಜಿ: ಗೋವಾದ ಪ್ರಸಕ್ತ ಪ್ರವಾಸೋದ್ಯಮವು ದೇಶೀಯ ಪ್ರವಾಸಿಗರನ್ನು ಅವಲಂಬಿಸುವಂತಾಗಿದೆ. ರಷ್ಯಾ-ಯುಕ್ರೇನ್ ಯುದ್ಧದ ಪರಿಣಾಮವು ಯುರೋಪ್ ಮೇಲೆ ಆಗಿದೆ. ಇದರಿಂದಾಗಿ ಪ್ರವಾಸಿಗರ ಆಗಮನ ಕೂಡ ಕಡಿಮೆಯಾಗಿದೆ. ಇದೀಗ ಗೋವಾಕ್ಕೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಹೊಸ ತಂತ್ರಗಳು ಮತ್ತು ಹಲವು ಸೌಲಭ್ಯಗಳನ್ನು ಕಲ್ಪಿಸುವತ್ತ ಗಮನಹರಿಸಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ನಿಖಿಲ್ ದೇಸಾಯಿ ಮಾಹಿತಿ ನೀಡಿದ್ದಾರೆ.

Advertisement

ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸಕ್ತ ವರ್ಷ ಮಳೆಗಾಲದ ಸಂದರ್ಭದಲ್ಲಿ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಪ್ರವಾಸೋದ್ಯಮ ಅವಲಂಭಿತ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ನಿಖಿಲ್ ದೇಸಾಯಿ ಅಭಿಪ್ರಾಯಪಟ್ಟರು. ದೇಶೀಯ ಪ್ರವಾಸಿಗರನ್ನು ಆಕರ್ಷಿಸಲು ಈವಾರದ ಕೊನೆಯಲ್ಲಿ ಗುಜರಾತ್ ಮತ್ತು ಅಹಮದಾಬಾದ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ನಿಖಿಲ್ ದೇಸಾಯಿ ಮಾಹಿತಿ ನೀಡಿದರು.

ರಾಜ್ಯದ ಕಡಲತೀರಗಳಲ್ಲಿರುವ ಸರಕಾರಿ ಆಸ್ತಿ ಒತ್ತುವರಿ ತೆರವಿಗೆ ಪ್ರವಾಸೋದ್ಯಮ ಇಲಾಖೆಯಿಂದ ಸಮೀಕ್ಷೆ ನಡೆಸಲಾಗುವುದು. ಉತ್ತರ ಗೋವಾದ ಕೇರಿಯಿಂದ ದಕ್ಷಿಣದ ಕಾಣಕೋಣವರೆಗಿನ ಬೀಚ್‍ಗಳನ್ನು ಸಮೀಕ್ಷೆ ಮಾಡಲಾಗುವುದು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ನಿಧಿಯಿಂದ ರಾಜ್ಯದ ವಿವಿದೆಡೆ 300 ಕೋಟಿರೂಗಳ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ದೇಸಾಯಿ ಮಾಹಿತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next