Advertisement

ಗೋವಾ : ಕ್ಯಾಮರಾದಲ್ಲಿ ಗೋಚರಿಸಿದ ಮೂರು ಪಟ್ಟೆ ಹುಲಿಗಳು

04:04 PM Dec 04, 2021 | Team Udayavani |

ಪಣಜಿ: 2020 ರಲ್ಲಿ ಸತ್ತರಿ ತಾಲೂಕಿನ ಮಹದಾಯಿ ಅಭಯಾರಣ್ಯ ಪ್ರದೇಶದ ಗೊಳಾವಲಿ ಗ್ರಾಮದಲ್ಲಿ ನಾಲ್ಕು ಪಟ್ಟೆ ಹುಲಿಗಳು ಸಾವನ್ನಪ್ಪಿದ ನಂತರ ಗೋವಾದಲ್ಲಿ ಪಟ್ಟೆ ಹುಲಿಗಳು ಇಲ್ಲ ಎಂದು ಹೇಳಲಾಗುತ್ತಿತ್ತು, ಆದರೆ ಇದೀಗ ಮಹದಾಯಿ ಅಭಯಾರಣ್ಯದಲ್ಲಿ ಮೂರು ಪಟ್ಟೆ ಹುಲಿಗಳು ಇರುವುದು ಅಭಯಾರಣ್ಯದಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement

ಕಳೆದ ವರ್ಷ ಗೊಳಾವಲಿ ಗ್ರಾಮದಲ್ಲಿ ನಾಲ್ಕು ಹುಲಿಗಳನ್ನು ವಿಷ ಹಾಕಿ ಕೊಂದ ರೀತಿಯಲ್ಲಿ ಪತ್ತೆಯಾಗಿದ್ದವು. ಈ ಘಟನೆಯ ನಂತರ ಪ್ರಸ್ತುತ ಮಹದಾಯಿ ಅಭಯಾರಣ್ಯದಲ್ಲಿ ಹುಲಿಗಳ ರಕ್ಷಣೆಗಾಗಿ ಎರಡು ವಿಶೇಷ ತಂಡಗಳು ಕಾರ್ಯ ನಿರ್ವಹಿಸುತ್ತಿದೆ.

ಈ ಹಿಂದೆಯೂ ಕೂಡ ಗೋವಾದ ಅಭಯಾರಣ್ಯಕ್ಕೆ ಕರ್ನಾಟಕದ ಅಭಯಾರಣ್ಯದಿಂದ ಹುಲಿಗಳು ಬಂದು ಹೋಗುತ್ತದೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗೋವಾದ ಮಹದಾಯಿ ಅಭಯಾರಣ್ಯದಲ್ಲಿ ಕ್ಯಾಮರಾಗಳನ್ನು ಅಳವಡಿಸಿ ಗೋವಾದ ಅಭಯಾರಣ್ಯದಲ್ಲಿ ಹುಲಿಗಳು ಇದೆ ಎಂಬುದು ಖಚಿತವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next