ಪಣಜಿ: ಪಣಜಿಯ ಅಟಲ್ ಸೇತುವೆಯಲ್ಲಿ ಕಳೆದ ಕೆಲ ದಿನಗಳಿಂದ ಪದೇ ಪದೇ ಅಪಘಾತ ನಡೆಯುತ್ತಿರುವುದನ್ನು ಪರಿಗಣಿಸಿ ಅಟಲ್ ಸೇತುವೆಯನ್ನು ಕೆಲ ದಿನಗಳ ವರೆಗೆ ಬಂದ್ ಮಾಡಬೇಕೆಂದು ರಾಜ್ಯ ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅಟಲ್ ಸೇತುವೆಯ ಮೇಲೆ ಪದೇ ಪದೇ ಸಂಭವಿಸುತ್ತಿರುವ ಅಪಘಾತವನ್ನು ಪರಿಗಣಿಸಿ, ಕೆಲ ದಿನಗಳ ವರೆಗೆ ಅಟಲ್ ಸೇತುವನ್ನು ಬಂದ್ ಮಾಡಿ ಅಗತ್ಯವಿರುವ ಕಡೆ ದುರಸ್ತಿ ಕಾರ್ಯ ಕೈಗೊಂಡು ನಂತರ ವಾಹನ ಸಂಚಾರ ಆರಂಭಿಸಬೇಕು ಎಂದು ಸಚಿವ ರೋಹನ್ ಖಂವಟೆ ಅಭಿಪ್ರಾಯಪಟ್ಟರು.
ಗೋವಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಅಟಲ್ ಸೇತು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಈ ಸೇತುವೆಯನ್ನು ಮದ್ರಾಸ್ ಐಐಟಿ ತಾಂತ್ರಿಕವಾಗಿ ಪರಿಶೀಲಿಸುತ್ತಿದೆ ಎನ್ನಲಾಗಿದೆ.