ಪಣಜಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತದ ಜನರಿಗೆ ಹೆಚ್ಚಿನ ಬೆಲೆಯಲ್ಲಿ ಪೆಟ್ರೋಲ್ ಮಾರುವ ಮೂಲಕ ಮೋಸ ಮತ್ತು ಲೂಟಿ ಮಾಡುತ್ತಿದೆ ಎಂದು ಗೋವಾ ಪ್ರದೇಶ ಕಾಂಗ್ರೇಸ್ ಸಮೀತಿ ಅಧ್ಯಕ್ಷ ಗಿರೀಶ್ ಚೋಡಣಕರ್ ಆರೋಪಿಸಿದ್ದಾರೆ.
ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಪ್ರತಿಭಟನೆ ನಡೆಸುತ್ತಿರುವ ಒಂದು ಭಾಗವಾಗಿ ಪಣಜಿಯಲ್ಲಿ ಕಾಂಗ್ರೇಸ್ ಸಮೀತಿ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ : ಮಮತಾ ಬ್ಯಾನರ್ಜಿ ನಮ್ಮ ನಾಯಕಿ; ಬಿಜೆಪಿ ತೊರೆದ ರಾಯ್ ಮತ್ತೆ ಟಿಎಂಸಿ ಸೇರ್ಪಡೆ
ಮೋದಿ ಸರ್ಕಾರವು ಪೆಟ್ರೋಲ್ ನಿಂದ ಹಣ ಸಂಗ್ರಿಸುತ್ತಿದೆ. ಪ್ರತಿ ಲೀಟರ್ ಗೆ 35.63 ರೂ ಇರುವ ಪೆಟ್ರೋಲ್ ಗೆ ಸರಕು, ಕಸ್ಟನ್,ಸುಂಕ,ಕೃಷಿ ಮೂಲ ಸೌಕರ್ಯ ಸೆಸ್, ರಸ್ತೆ ಮತ್ತು ಮೂ ಸೌಕರ್ಯ ಸೆಸ್, ರಾಜ್ಯ ವ್ಯಾಟ್ ಮತ್ತು ಇತರ ಶುಲ್ಕವನ್ನು ಮೋದಿ ಸರ್ಕಾರ ವಿಧಿಸುತ್ತಿದೆ. ಇದರಿಂದಾಗಿ 35.63 ರೂ ಇರುವ ಪೆಟ್ರೋಲ್‍ನ್ನು 93.80 ರೂಗೆ ಮತ್ತು 38.16 ರೂಗಳಿರುವ ಡೀಸೆಲ್‍ನ್ನು 91.50 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದು ಬಹಿರಂಗವಾಗಿ ನಡೆಯುತ್ತಿರುವ ಲೂಟಿಯಾಗಿದೆ. 2014 ರಿಂದ ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ 22 ಲಕ್ಷ 70 ಸಾವಿರ ಕೋಟಿ ರೂ ದೇಶದ ಜನರಿಂದ ದೋಚಲಾಗಿದೆ ಎಂದು ಗಿರೀಶ್ ಚೋಡಣಕರ್ ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಸೇರಿದಂತೆ ರಾಜ್ಯ ಕಾಂಗ್ರೇಸ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ಆಂಬ್ಯುಲೆನ್ಸ್ ಓಡಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್