Advertisement

ಶೀಘ್ರದಲ್ಲೇ ಪೊಂಡಾ ಗೋವಾದ ಮೂರನೇಯ ಜಿಲ್ಲೆಯಾಗಿ ಘೋಷಣೆ: ಶಾಸಕ ರವಿ ನಾಯ್ಕ

04:58 PM Jan 12, 2022 | Team Udayavani |

ಪಣಜಿ: ಶೀಘ್ರದಲ್ಲಿಯೇ ಪೊಂಡಾ ಗೋವಾದ ಮೂರನೇಯ ಜಿಲ್ಲೆಯಾಗಿ ಘೋಷಣೆಯಾಗಲಿದೆ ಎಂದು ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಪೊಂಡಾ ಶಾಸಕ ರವಿ ನಾಯ್ಕ ಹೇಳಿದ್ದಾರೆ.

Advertisement

ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಈ ಕುರಿತು ಭರವಸೆ ನೀಡಿದ್ದಾರೆ. ಇದರಿಂದಾಗಿ ಪೊಂಡಾ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರವಿ ನಾಯ್ಕ ಹೇಳಿದರು.

ಬುಧವಾರ ಪೊಂಡಾದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಪೊಂಡಾ ಮೂರನೇಯ ಜಿಲ್ಲೆಯಾಗಿ ಘೋಷಣೆಯಾದರೆ ಆಡಳಿತದ ಒತ್ತಡ ಕಡಿಮೆಯಾಗಲಿದೆ. ಬಡ ನಾಗರೀಕರಿಗೆ ತಮ್ಮ ಕೆಲಸಕ್ಕಾಗಿ ಓಡಾಟ ನಡೆಸಲು ಹೆಚ್ಚು ಅನುಕೂಲವಾಗಲಿದೆ ಎಂದು ರವಿ ನಾಯ್ಕ ನುಡಿದರು.

ಪ್ರಸಕ್ತ ಗೋವಾ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ 40 ವಿಧಾನಸಭಾ ಸ್ಥಾನಗಳ ಪೈಕಿ 27 ಸ್ಥಾನಗಳಲ್ಲಿ ಜಯಗಳಿಸುವ ನಿರೀಕ್ಷೆಯಿದೆ. ಬಿಜೆಪಿ ತೊರೆದಿರುವವರಿಂದ ಪಕ್ಷಕ್ಕೆ ಯಾವುದೇ ಧಕ್ಕೆಯಿಲ್ಲ, ಇದರಿಂದ ಅನುಕೂಲವೇ ಆಗಲಿದೆ ಎಂದು ರವಿ ನಾಯ್ಕ ನುಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next