ಪಣಜಿ: ಕಾಂಗ್ರೆಸ್ ಪಕ್ಷದಿಂದ ಹೊರನಡೆದು, ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ವಾರಗಳ ನಂತರ, ಯಾವುದೇ ಕಾರಣ ನೀಡದೆ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಸೋಮವಾರ ತಮ್ಮ ಮಾತೃಪಕ್ಷಕ್ಕೆ ಮರುಸೇರ್ಪಡೆಯಾಗುವ ಸುಳಿವು ನೀಡಿದ್ದಾರೆ.
ಅಲೆಕ್ಸೊ, ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರಿ ತಪ್ಪು ಮಾಡಿದ್ದಕ್ಕಾಗಿ ಬೆಂಬಲಿಗರು ಮತ್ತು ಹಿತೈಷಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಸೋಮವಾರ ಪಣಜಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೌರೆಂಕೊ ಅವರು ಟಿಎಂಸಿಗೆ ಸೇರಲು ನಿರ್ಧರಿಸಿದ ನಂತರ ತೀವ್ರ ಹಿನ್ನಡೆಯನ್ನು ಎದುರಿಸಬೇಕಾಯಿತು, ಇದು “ಹೊಸ ಉದಯದ” ಭರವಸೆ ನೀಡಿದೆ ಎಂದು ಹೇಳಿದರು.
‘ಈಗ ನಾನು ಜನರು ನಂಬುವ ಅದೇ ವ್ಯಕ್ತಿಯಾಗಲು ನಾನು ಬಯಸುತ್ತೇನೆ ಎಂದು ಹೇಳಿದರು.ನಾನು ಟಿಎಂಸಿಗೆ ಸೇರುವ ಮೂಲಕ ಅನೇಕ ಸ್ನೇಹಿತರನ್ನು ಮತ್ತು ನನ್ನ ಹತ್ತಿರದ ಮತ್ತು ಆತ್ಮೀಯ ಬೆಂಬಲಿಗರನ್ನು ನೋಯಿಸಿದ್ದೇನೆ. ನಾನು ನನ್ನ ಕುಟುಂಬ ಸದಸ್ಯರಿಗೆ ಮತ್ತು ನನ್ನೊಂದಿಗೆ ಸದಾ ಕಾಲ ನಿಂತವರನ್ನು ಸಹ ನೋಯಿಸಿದ್ದೇನೆ’ ಎಂದರು.
‘ಜನರ ಹಿತದೃಷ್ಟಿಯಿಂದ ಟಿಎಂಸಿಗೆ ಸೇರಲು ನಿರ್ಧರಿಸಿದ್ದೆ, ಏಕೆಂದರೆ ಅವರಿಗೆ “ಹೊಸ ಉದಯ” ಎಂದು ಭರವಸೆ ನೀಡಲಾಗಿತ್ತು. “ನಾನು ಜನರಿಗಾಗಿ ಹೋರಾಡಿದ್ದೇನೆ. ಅವರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ನಾನು ಹೃದಯ ಮತ್ತು ಮನಸ್ಸಿನಿಂದ ಜನರಿಗಾಗಿ ಕೆಲಸ ಮಾಡಿದ್ದೇನೆ’ ಎಂದರು.
Related Articles
ತಮ್ಮ ಭವಿಷ್ಯದ ರಾಜಕೀಯದ ಕುರಿತು ಮಾತನಾಡಿ, ‘ತಮ್ಮ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರುವಂತೆ ಕೇಳಿಕೊಂಡಿದ್ದಾರೆ’ ಎಂದರು.
‘ಕಾಂಗ್ರೆಸ್ ನಾಯಕ ಮೈಕೆಲ್ ಲೋಬೋ ಅವರು ನನ್ನನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದಾರೆ. ನನ್ನ ಜನರು ಹೇಳುವುದನ್ನು ನಾನು ಕೇಳುತ್ತೇನೆ’ ಎಂದರು.
ಟಿಎಂಸಿಗೆ ಸೇರುವುದರಿಂದ ಮತಗಳನ್ನು ವಿಭಜಿಸುವ “ಹೊರಗಿನ ಪಕ್ಷ”ವನ್ನು ಗೋವಾಕ್ಕೆ ಆಹ್ವಾನಿಸಿದಂತೆ ಎಂದು ಅವರ ಬೆಂಬಲಿಗರು ಆತಂಕ ವ್ಯಕ್ತಪಡಿಸಿದ್ದರು. ಅಲೆಕ್ಸೊ ಕಳೆದ ಡಿಸೆಂಬರ್‌ನಲ್ಲಿ ಟಿಎಂಸಿ ಸೇರಲು ಕರ್ಟೋರಿಮ್‌ನ ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆಗ ಅವರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದರು.
ಭಾನುವಾರ, ಅವರು ಟಿಎಂಸಿ ತೊರೆಯುವ ನಿರ್ಧಾರದ ಬಗ್ಗೆ ಬ್ಯಾನರ್ಜಿ ಅವರಿಗೆ ಕಳುಹಿಸಿದ ಪತ್ರದಲ್ಲಿ ಯಾವುದೇ ಕಾರಣವನ್ನು ನೀಡದೆ ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ.