Advertisement

ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಹಿನ್ನೆಲೆ: ಸ್ವಯಂಪೂರ್ಣ ಯುವಾ ಕಾರ್ಯಕ್ರಮ

04:43 PM Oct 26, 2021 | Team Udayavani |

ಪಣಜಿ: ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಾರ್ಮಿಕ  ಇಲಾಖೆಯ ವತಿಯಿಂದ ಅಕ್ಟೋಬರ್ 27 ರಂದು ಮಾಪ್ಸಾದಲ್ಲಿ ಮತ್ತು ಅಕ್ಟೋಬರ್ 30 ರಂದು ಪೊಂಡಾದಲ್ಲಿ ಸ್ವಯಂಪೂರ್ಣ ಯುವಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶದ 60 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

Advertisement

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಈ ಹಿಂದೆ ಕೂಡ ರಾಜ್ಯದ ಸಾಖಳಿ, ತಾಳಗಾಂವನಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೀಗ ಈ ಕಾರ್ಯಕ್ರಮದಲ್ಲಿ ಕೆಲ ಬದಲಾವಣೆಯನ್ನು ತರಲಾಗಿದ್ದು ಅನೇಕ ಖಾಸಗಿ ಉದ್ಯೋಗ, ಸಂಸ್ಥೆಗಳನ್ನು ಕರೆಯಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ. ಇದಕ್ಕಾಗಿ ಸರ್ಕಾರಿ ಪೋರ್ಟಲ್‍ನಲ್ಲಿ ಹೆಸರು ನೋಂದಾಯಿಸಬೇಕು  ಅಥವಾ ಅಂದು ಬೆಳಿಗ್ಗೆ ಖುದ್ದಾಗಿ ತಾವೇ ಬಂದು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಇದನ್ನೂ ಓದಿ:ಚಿಗ್ಗಾವಿ ಗ್ರಾಮದಲ್ಲಿ ಹಣ-ಆಸ್ತಿಗಾಗಿ ತಂದೆಯಿಂದಲೇ ಮಗನಿಗೆ ಹಿಂಸೆ

ರಾಜ್ಯ ಸರ್ಕಾರದ ವತಿಯಿಂದ ಪ್ರಸಕ್ತ ವರ್ಷ 10,000 ಜನ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ಭರವಸೆ ನೀಡಲಾಗಿತ್ತು. ಈ ಪೈಕಿ ಇದುವರೆಗೂ 8000 ನೌಕರಿಯ ಜಾಹೀರಾತು ನೀಡಲಾಗಿದ್ದು, 1000 ಕ್ಕೂ ಹೆಚ್ಚು ನೌಕರಿಯ ಎಲ್ಲ ಪ್ರಕ್ರಿಯೆಗಳನ್ನು ಡಿಸೆಂಬರ್ 19 ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next