Advertisement

ಪೋಲಿಸರಿಗೆ ಯಕ್ಷ ಪ್ರಶ್ನೆಯಾಗಿ ಉಳಿದ ಸಾಗರ ನಾಯ್ಕನ ಕೊಲೆ ಪ್ರಕರಣ

06:59 PM Oct 19, 2021 | Team Udayavani |

ಪಣಜಿ: ಪಾರ್ಕಿಂಗ್ ಶುಲ್ಕದ ವಿಚಾರವಾಗಿ ಉಂಟಾದ ಜಗಳವೊಂದರಲ್ಲಿ  ಕಳೆದ ಶುಕ್ರವಾರ ಪಾರ್ಕಿಂಗ್ ಹಣ ವಸೂಲಿದಾರ ಸಾಗರ ನಾಯ್ಕ ಈತನ ಕೊಲೆಯಾಗಿತ್ತು. ಈ ಘಟನೆಯ ನಡುವೆ ಅಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ದೊರೆತಿರುವ ಮಾಹಿತಿ ಪ್ರಕಾರ  ಸಾಗರ ನಾಯ್ಕ ನ ಬಳಿ ಕರ್ನಾಟಕ ಮೂಲದ ಅಸಾಯಕ ಮಹಿಳೆಯೋರ್ವಳು ತನ್ನ ಪ್ರಾಣಭಿಕ್ಷೆ  ಬೇಡುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ. ಇದರಿಂದಾಗಿ ಸಾಗರ ನಾಯ್ಕ ಈತನ ಕೊಲೆ ಹೇಗಾಗಿದೆ ಎಂಬುದು ಪೋಲಿಸರಿಗೆ ಪ್ರಶ್ನೆಯಾಗಿಯೇ ಉಳಿದಿದೆ.

Advertisement

 ಘಟನೆಯ ವಿವರ: ಗೋವಾದ ಹಣಜುಣ ಬೀಚ್‍ನಲ್ಲಿ ಕಳೆದ ಶುಕ್ರವಾರ ಮಧ್ಯಾಹ್ನ ಪಾರ್ಕಿಂಗ್ ಹಣ ವಸೂಲಿದಾರ ಮತ್ತು ಕರ್ನಾಟಕದ ಪ್ರವಾಸಿಗರ ನಡುವೆ ಮಾರಾಮಾರಿಯಾಗಿತ್ತು. ಈ ಘಟನೆಯಲ್ಲಿ ಸಾಗರ ನಾಯ್ಕ ಮೃತಪಟ್ಟಿದ್ದ. ಈ ಘಟನೆಯ ನಂತರ ಪಲಾಯನಗೈಯ್ಯುತ್ತಿದ್ದ ಕರ್ನಾಟಕದ ಪ್ರವಾಸಿಗರನ್ನು ಕಾಣಕೋಣ ಪೋಲಿಸರು ಬಂಧಿಸಿ ಹಣಜುಣ ಪೋಲಿಸರಿಗೆ ಒಪ್ಪಿಸಿದ್ದರು.

ಇದನ್ನೂ ಓದಿ:ಭೂಕಂಪನ‌ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ

ಆದರೆ ಆ ಘಟನೆಯ ಸಂದರ್ಭದಲ್ಲಿ ಅಸಹಾಯಕ ಕರ್ನಾಟಕದ ಮಹಿಳೆಯೋರ್ವಳು ಸಾಗರ ನಾಯ್ಕನ ಬಳಿ ತನ್ನ ಜೀವಭಿಕ್ಷೆ ಬೇಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಷ್ಟೇ ಅಲ್ಲದೆಯೇ ಸಾಗರ ನಾಯ್ಕ ನ ಮೇಲೂ ಪೋಲಿಸ್ ಠಾಣೆಯಲ್ಲಿ ಹಲವು ದೂರು ದಾಖಲಾಗಿರುವುದಾಗಿ ಪೋಲಿಸರು ಮಾಹಿತಿ ನೀಡಿದ್ದಾರೆ.

ಪ್ರವಾಸಿಗರ ಮೇಲೆ ಧಮಕಿ ಹಾಕಿ ಹಣ ವಸೂಲಿ ಮಾಡುವುದು, ಹಲ್ಲೆ ನಡೆಸುವುದು ಇಂತಹ ಹಲವು ದೂರುಗಳು ಸಾಗರ ನಾಯ್ಕ ಈತನ ವಿರುದ್ದ ಈ ಹಿಂದೆ ಬಂದಿರುವುದಾಗಿ ಪೋಲಿಸರು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆಯೇ ಸ್ಥಳೀಯ ಪ್ರತ್ಯಕ್ಷದರ್ಶಿಗಳು ಈ ಪ್ರಕರಣದಲ್ಲಿ ಸಾಗರ ನಾಯ್ಕ ಈತನದ್ದೇ ತಪ್ಪು ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next