Advertisement

‌ ಅ. 15 ರಿಂದ ಗೋವಾಕ್ಕೆ ಬಂದಿಳಿಯಲಿವೆ ವಿದೇಶಿ ಚಾರ್ಟರ್ ವಿಮಾನಗಳು: ಅಮಿತ್ ಶಾ

07:25 PM Oct 14, 2021 | Team Udayavani |

ಪಣಜಿ: ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ನಂತರ ಗೋವಾಕ್ಕೆ ಆಗಮಿಸುತ್ತಿದ್ದ ವಿದೇಶಿ ಚಾರ್ಟರ್ ವಿಮಾನ ಸೇವೆ ಕೂಡ ಸ್ಥಗಿತಗೊಂಡಿತ್ತು. ಇದರಿಂದಾಗಿ ಗೋವಾ ಪ್ರವಾಸೋದ್ಯಮ ಅವಲಂಭಿತ ವಿವಿಧ ಉದ್ಯಮಗಳು ನಷ್ಠ ಅನುಭವಿಸುವಂತಾಗಿತ್ತು. ಆದರೆ ಇದೀಗ ಅಕ್ಟೋಬರ್ 15 ರಿಂದ ಗೋವಾಕ್ಕೆ ವಿದೇಶಿ ಚಾರ್ಟರ್ ವಿಮಾನಗಳು ಬಂದಿಳಿಯಲಿದೆ. ಈ ಕುರಿತು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಘೋಷಿಸಿದ್ದಾರೆ.

Advertisement

ಗೋವಾದ ಧಾರಾಬಾಂದೋಡಾದಲ್ಲಿ ಫಾರೆನ್ಸಿಕ್ ಸಾಯನ್ಸ ವಿದ್ಯಾಪೀಠದ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅಮಿತ್ ಶಾ ಈ ಘೋಷಣೆ ಮಾಡಿದ್ದಾರೆ.

ಗೋವಾ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗೋವಾದಲ್ಲಿ ಪ್ರವಾಸೋದ್ಯಮ ಅವಲಂಭಿತ ಉದ್ಯೋಗಿಗಳಿಗೆ 10 ಲಕ್ಷ ರೂ ವರೆಗೆ ಹಾಗೂ ಟೂರಿಸ್ಟ್ ಗೈಡ್‍ಗಳಿಗೆ 1 ಲಕ್ಷ ರೂಗಳ ವರೆಗೆ ಸಾಲ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದೆ. ಇಷ್ಟೇ ಅಲ್ಲದೆಯೇ ಅಕ್ಟೋಬರ್ 15 ರಿಂದ ಗೋವಾಕ್ಕೆ ವಿದೇಶಿ ಚಾರ್ಟರ್ ವಿಮಾನ ಸೇವೆ ಆರಂಭಗೊಳ್ಳಲಿದೆ ಎಂದು ಅಮಿತ್ ನುಡಿದರು.

ಇದನ್ನೂ ಓದಿ:ಪರೀಕರ್ ಇದ್ದಿದ್ದರಾದರೂ ಗೋವಾ ಬಿಜೆಪಿಗೆ ಬಹುಮತ ಪಡೆಯಲಾಗಲಿಲ್ಲ: ರಾವುತ್

ಈ ಮೊದಲು ಗೋವಾಕ್ಕೆ ಪ್ರತಿ ವರ್ಷ ಸಾವಿರಾರು ಚಾರ್ಟರ್ ವಿಮಾನಗಳ ಮೂಲಕ ಲಕ್ಷಾಂತರ ವಿದೇಶಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿತ್ತಾದರೂ ಚಾರ್ಟರ್ ವಿಮಾನಗಳು ಬಂದಿಳಿಯಲು ಪರವಾನಗಿ ಲಭಿಸದ ಕಾರಣ ಗೋವಾ ಪ್ರವಾಸೋದ್ಯಮ ದೇಶೀಯ ಪ್ರವಾಸಿಗರನ್ನೇ ಅವಲಂಭಿಸಿರುವಂತಾಗಿತ್ತು. ಇದೀಗ ಗೋವಾಕ್ಕೆ ವಿದೇಶೀ ಪ್ರವಾಸಿಗರ ಆಗಮನ ಆರಂಭಗೊಳ್ಳಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next