Advertisement

ಮುಂಬರುವ ಚುನಾವಣೆಗಳಲ್ಲಿ ಗೆಲುವು ನಮ್ಮದೆ: ಪಿ.ಚಿದಂಬರಂ

07:02 PM Oct 14, 2021 | Team Udayavani |

ಪಣಜಿ: ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆ ಮತ್ತು 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವೇ ಜಯಗಳಿಸಲಿದೆ. ಯಾರು ಗೋವಾ ಗೆಲ್ಲುತ್ತಾರೋ ಅವರು ದೆಹಲಿ ಗೆಲ್ಲುತ್ತಾರೆ.

Advertisement

2007 ರಲ್ಲಿ ನಾವು ಗೋವಾ ಗೆದ್ದಿದ್ದೆವು, ನಂತರ 2009 ರಲ್ಲಿ ದೆಹಲಿ ಗೆದ್ದೆವು. ದುರ್ದೈವದಿಂದ 2012 ರಲ್ಲಿ ಗೋವಾದಲ್ಲಿ ನಾವು ಸೋಲನ್ನನುಭವಿಸಿದೆವು, 2014 ರಲ್ಲಿ ದೆಹಲಿಯಲ್ಲೂ ಸೋತೆವು ಎಂದು ಗೋವಾದ ಕಾಂಗ್ರೇಸ್ ಚುನಾವಣಾ ನಿರೀಕ್ಷಕ ಪಿ.ಚಿದಂಬರಂ ನುಡಿದರು.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 310 ಹೊಸ ಪ್ರಕರಣ ಪತ್ತೆ | 347 ಸೋಂಕಿತರು ಗುಣಮುಖ 

ಪಣಜಿಯಲ್ಲಿ ಕಾಂಗ್ರೇಸ್ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಪಿ.ಚಿದಂಬರಂ-ಕಾಂಗ್ರೇಸ್ ಪಕ್ಷವು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದೆ. 2022 ರಲ್ಲಿ ಗೋವಾ ಮತ್ತು 2024 ರಲ್ಲಿ ನಾವು ದೆಹಲಿಯನ್ನು ಗೆಲ್ಲಲಿದ್ದೇವೆ. ಇತಿಹಾಸವು ನಮ್ಮದಾಗಿದೆ. ಇಂದು ನಾವು ಶುಭ ದಿನದಂದು ಚುನಾವಣಾ ಪ್ರಚಾರ ಕಾರ್ಯಾಲಯದ ಉದ್ಘಾಟನೆ ನೆರವೇರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next