Advertisement

ಗೋವಾದಲ್ಲಿ ಕ್ಯಾಸಿನೊಗಳನ್ನು ಪುನರಾರಂಭಿಸಲು ಸರ್ಕಾರದಿಂದ ಹಸಿರು ನಿಶಾನೆ ಸಾಧ್ಯತೆ

06:07 PM Sep 12, 2021 | Team Udayavani |

ಪಣಜಿ: ಕೋವಿಡ್ ಕಠಿಣ ನಿಯಮಾವಳಿಗಳ ಸಡಿಲಿಕೆಯ ನಂತರ ಇದೀಗ ಗೋವಾದಲ್ಲಿ ಕ್ಯಾಸಿನೊಗಳ ಪುನರಾರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿಸಲು ಸಿದ್ಧತೆ ನಡೆಸುತ್ತಿದೆ.

Advertisement

ರಾಜ್ಯದಲ್ಲಿ ಕೋವಿಡ್ ನಿಯಮಾವಳಿಗಳ ಸಡಿಲಿಕೆಗೆ ಸಂಬಂಧಿಸಿದಂತೆ ತಜ್ಞ ಸಮೀತಿಯ ಬೈಠಕ್ ನಡೆಸಲಾಗುತ್ತಿದೆ. ಈ ವಾರ ನಡೆಯುವ ಬೈಠಕ್‍ನಲ್ಲಿ ಕೆಲ ನಿಯಮಾವಳಿಗಳ ಸಡಿಲಿಕೆ ಮೂಲಕ ಕ್ಯಾಸಿನೊ ಆರಂಭಕ್ಕೆ ಸರ್ಕಾರ ಪರವಾನಗಿ ನೀಡುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ:ರಜೆ ಮತ್ತು ಕೆಲಸದ ದಿನಗಳ ನಡುವಿನ ವ್ಯತ್ಯಾಸವೇ ಅಂತ್ಯ: ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ

ಈ ಕುರಿತಂತೆ ಮೆಜೆಸ್ಟಿಕ್ ಪ್ರೈಡ್‍ನ ಸಂಚಾಲಕ ಶ್ರೀನಿವಾಸ್ ನಾಯ್ಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ- ರಾಜ್ಯದಲ್ಲಿ ಎಲ್ಲಾ ಉದ್ಯೋಗ ವ್ಯವಹಾರಗಳು ಆರಂಭಗೊಂಡಿವೆ. ಕೇವಲ ಕ್ಯಾಸಿನೊ ಮಾತ್ರ ಬಂದ್ ಇದೆ, ಇದರಿಂದಾಗಿ ಪ್ರವಾಸೋದ್ಯಮದ ಮೇಲೆ ವಿಪರೀತ ಪರಿಣಾಮವುಂಟಾಗುತ್ತಿದೆ. ಕ್ಯಾಸಿನೊದಲ್ಲಿ ಶೇ 100 ರಷ್ಟು ಕಾರ್ಮಿಕರಿಗೆ ಕೋವಿಡ್ ಲಸಿಕೆ ಪೂರ್ಣಗೊಂಡಿದೆ. ಕ್ಯಾಸಿನೊ ಸಂಚಾಲಕರು ಕರೋನಾಕ್ಕೆ ಸಂಬಂಧಿಸಿದ ಎಲ್ಲಾ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಕ್ಯಾಸಿನೊ ಆರಂಭಿಸಲು ಪರವಾನಗಿ ನೀಡಬೇಕು ಎಂದು ಸರ್ಕಾರದ ಬಳಿ ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next