Advertisement

ಗೋವಾ: ಕೊಲೆ, ಹೊಡೆದಾಟ, ದರೋಡೆಯಂತಹ ಘಟನೆ ಹೆಚ್ಚಳ

09:55 PM Sep 09, 2022 | Team Udayavani |

ಪಣಜಿ: ರಾಜ್ಯದಲ್ಲಿ ಅಪರಾಧ ಪ್ರಮಾಣ ವಿಪರೀತವಾಗಿ ಹೆಚ್ಚಿರುವುದರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರಿದೆ. ಕೊಲೆ, ಹೊಡೆದಾಟ, ದರೋಡೆಯಂತಹ ಘಟನೆಗಳಿಂದ ಗೋವಾ ತತ್ತರಿಸಿ ಹೋಗಿದ್ದು, ರಾಜ್ಯದ ಎಲ್ಲ ಕಡೆಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ರಾಜ್ಯದ ಸಾಂಸ್ಕ್ರತಿಕ ರಾಜಧಾನಿ ಎಂದೇ ಕರೆಸಿಕೊಳ್ಳುವ ಫೊಂಡಾ ನಗರದಲ್ಲಿಯೂ ಅಪರಾಧಗಳ ಪ್ರಮಾಣ ಎಳ್ಳಷ್ಟೂ ಕಡಿಮೆಯಾಗಿಲ್ಲ. ಪೊಲೀಸರು ಶತಪ್ರಯತ್ನ ನಡೆಸುತ್ತಿದ್ದರೂ ಕ್ರಿಮಿನಲ್ ಗಳು ಪೊಲೀಸರಿಂದ ನುಣುಚಿಕೊಳ್ಳುತ್ತಿರುವುದರಿಂದ ಕಳ್ಳರನ್ನು ಹಿಡಿಯುವುದು ಕಷ್ಟವಾಗುತ್ತಿದೆ.

Advertisement

ಕಳೆದ ಎರಡು ತಿಂಗಳ ಫೋಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆ ಅಪರಾಧ ಪ್ರಕರಣಗಳನ್ನು ಅವಲೋಕಿಸಿದರೆ, ಇತರ ಅಪರಾಧಗಳಿಗೆ ಹೋಲಿಸಿದರೆ ಕಳ್ಳತನದ ಸಂಖ್ಯೆಯಲ್ಲಿ ದೊಡ್ಡ ಹೆಚ್ಚಳ ಕಂಡುಬಂದಿದೆ. ಹದಿನೈದು ದಿನಗಳ ಹಿಂದೆ ಫೋಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ದಿನ ನಾಲ್ಕು ಕಳ್ಳತನ ನಡೆದಿತ್ತು. ಅದರಲ್ಲಿ ಖಂಡೋಲದ ಮಹಾಗಣಪತಿ ದೇವಸ್ಥಾನದಲ್ಲಿ  ಹತ್ತರಿಂದ ಹನ್ನೆರಡು ಲಕ್ಷ ರೂ ಕಳ್ಳತನ, ಮತ್ತೊಂದೆಡೆ, ತಿಸ್ಕ-ಉಸ್ಗಾಂವ್‍ನಲ್ಲಿ ಕಳ್ಳರು ಎರಡು ಬ್ಯಾಂಕ್‍ಗಳ ಎಟಿಎಂಗಳನ್ನು ಮುರಿದು ಸುಮಾರು 10 ಲಕ್ಷ ರೂ  ಲೂಟಿ ಮಾಡಿದ್ದಾರೆ. ಮೇಲಾಗಿ ಮಹಿಳೆಯ ಕೊರಳಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಕಳ್ಳರನ್ನು  ಹಿಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.  .

ಸಚಿವರಿಂದ  ಎಚ್ಚರಿಕೆ!
ಫೋಂಡಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಕೃಷಿ ಸಚಿವ ರವಿ ನಾಯ್ಕ ಸುದ್ಧಿಗಾರರೊಂದಿಗೆ ಮಾತನಾಡಿ- ರಾಜ್ಯದಲ್ಲಿ ಪೊಲೀಸರ ಮೇಲೆ ಒತ್ತಡವಿದ್ದು, ಅಪರಾಧ ಪ್ರಮಾಣವೂ ಹೆಚ್ಚಾಗಿದೆ. ಅಪರಾಧ ತಡೆಯಲು ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ, ಆದರೆ ನಾಗರಿಕರು ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next