Advertisement

ಗೋವೆಯಲ್ಲಿ ಮುಂದಿನ ತಿಂಗಳಿಂದ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ

04:29 PM Jun 26, 2018 | Team Udayavani |

ಪಣಜಿ : ಗೋವಾ ಸರಕಾರ ಮುಂದಿನ ತಿಂಗಳಿಂದ ರಾಜ್ಯದಲ್ಲಿನ ಕೆಲವು ಪ್ರಮುಖ ಪ್ರವಾಸಿ ತಾಣಗಳಿಗೆ ತನ್ನದೇ ಆದ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಯನ್ನು ಆರಂಭಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಮನೋಹರ ಅಜಗಾಂವ್‌ಕರ್‌ ಹೇಳಿದ್ದಾರೆ.

Advertisement

ಗೋವೆಯ ಸುಮಾರು 2,800 ಲೈಸನ್ಸ್‌ ಇರುವ ಟ್ಯಾಕ್ಸಿ ಡ್ರೈವರ್‌ಗಳು ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೊಬೈಲ್‌ ಆ್ಯಪ್‌ ಆಧಾರಿತ “ಗೋವಾ ಮೈಲ್ಸ್‌’ ಗೆ ಸೇರಲಿದ್ದಾರೆ ಎಂದು ಸಚಿವ ಅಜಗಾಂವ್‌ಕರ್‌ ಹೇಳಿದರು. 

ಪ್ರಕೃತ ಗೋವೆಯ ಟೂರಿಸ್ಟ್‌ ಟ್ಯಾಕ್ಸಿ ಆಪರೇಟರ್‌ಗಳು ತಮ್ಮ ಉದ್ಯಮವನ್ನು ಖಾಸಗಿ ನೆಲೆಯಲ್ಲಿ ಮಾಡುತ್ತಿದ್ದಾರೆ. ಇವರು ಈ ಹಿಂದೆ ಓಲಾ ಮುಂತಾದ ಆನ್‌ಲೈನ್‌ ಕ್ಯಾಬ್‌ ಸಂಸ್ಥೆಗಳ ಗೋವಾ ಪ್ರವೇಶವನ್ನು ವಿರೋಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next