Advertisement

ಮಹದಾಯಿ ವಿವಾದ: ಗೋವಾ ಸರಕಾರದ ಗಮನ ಸೆಳೆದ ಕರ್ನಾಟಕದ ನಡೆ

07:08 PM Aug 05, 2022 | Team Udayavani |

ಪಣಜಿ: ಮಹದಾಯಿ ನೀರು ಹಂಚಿಕೆ ಕುರಿತು ಕರ್ನಾಟಕ ಹಾಗೂ ಗೋವಾ ರಾಜ್ಯದಲ್ಲಿ ನ್ಯಾಯಾಲಯದ ವಿವಾದ ನಡೆಯುತ್ತಿರುವಾಗಲೇ ನೀರು ಹರಿಸಲು ಕಂಬಗಳನ್ನು ಹಾಕಿ ಹಲತರಾ ನಾಲಾ ನೀರು ಹರಿಸಲು ಗುರುತು ಹಾಕಲು ಕರ್ನಾಟಕ ಮುಂದಾಗಿರುವುದು ಗೋವಾ ಸರ್ಕಾರದ  ಗಮನ ಸೆಳೆದಿದೆ. ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ಅವರು ಈ ವಿಷಯವನ್ನು ಸುಪ್ರೀಂ ಕೋರ್ಟ್‍ನಲ್ಲಿ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಸಚಿವ ಶಿರೋಡ್ಕರ್ ಮಾತನಾಡಿ, ಸರಕಾರ ಮಹದಾಯಿ ನದಿ ನೀರು ಹಂಚಿಕೆ  ವಿಚಾರದಲ್ಲಿ ಗಂಭೀರವಾಗಿದೆ. ಮಹದಾಯಿ ಜಲಾನಯನ ಪ್ರದೇಶದ ನೀರು ಹಂಚಿಕೆ ಸುಪ್ರೀಂ ಕೋರ್ಟ್ ಮತ್ತು ಮಹದಾಯಿ ನದಿ ನೀರು ಹಂಚಿಕೆ ನ್ಯಾಯಾಧೀಕರಣದಲ್ಲಿದೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಗಸ್ಟ್ 10 ರಂದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ಹಿಂದೆ 2014ರಲ್ಲಿ ಕರ್ನಾಟಕವು ಪ್ರಕರಣ ಪೂರ್ಣ ಇತ್ಯರ್ಥವಾಗುವವರೆಗೆ ನೀರನ್ನು ಬಳಸುವುದಿಲ್ಲ ಅಥವಾ ಬೇರೆಡೆಗೆ ತಿರುಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು ಎಂದು ಅವರು ಉಲ್ಲೇಖಿಸಿದರು.

ಮಹದಾಯಿ ನದಿ ನೀರು ವಿಷಯದಲ್ಲಿ ಕರ್ನಾಟಕ ಸರ್ಕಾರ ದುರಹಂಕಾರದಿಂದ ನಡೆದುಕೊಳ್ಳುತ್ತಿದೆ.  ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು, ಮಹದಾಯಿ ನದಿಗೆ ಕರ್ನಾಟಕ ಅಣೆಕಟ್ಟು ಕಟ್ಟದಂತೆ ತಡೆಯಬೇಕು ಎಂದು ಗೋವಾ ಫಾರ್ವರ್ಡ್ ಪಕ್ಷದ ನಾಯಕ ಹಾಗೂ  ಶಾಸಕ ವಿಜಯ್ ಸರ್ದೇಸಾಯಿ ಆಗ್ರಹಿಸಿದ್ದಾರೆ.

ಸರ್ದೇಸಾಯಿ ಅವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ನೀಡಿರುವ  ವಿಡಿಯೋ ಸಂದೇಶದಲ್ಲಿ ”ಮಹದಾಯಿ ನಿಮ್ಮ ನಿಜವಾದ ತಾಯಿಯಾಗಿದ್ದರೆ ಕರ್ನಾಟಕ ಕತ್ತು ಹಿಸುಕುವುದನ್ನು ತಡೆಯಬೇಕು” ಎಂದು ಒತ್ತಾಯಿಸಿದ್ದಾರೆ.  2023ರಲ್ಲಿ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಇರುವುದರಿಂದ ಮಹದಾಯಿಯೊಂದಿಗೆ ಏನು ಬೇಕಾದರೂ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗೆ ನೀಡಬೇಡಿ. ಕರ್ನಾಟಕಕ್ಕೆ ಮಹದಾಯಿ ಮಾರಾಟ ಮಾಡದಂತೆ ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next