ಪಣಜಿ: ಕಳೆದ ಕೆಲ ದಿನಗಳ ಹಿಂದೆ ಗೋವಾದಲ್ಲಿ ಮೊದಲ ಒಮಿಕ್ರಾನ್ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದರು, ಇದೀಗ ಈ ಒಮಿಕ್ರಾನ್ ಸೋಂಕಿತ ಗುಣಮುಖರಾಗಿದ್ದು ರಾಜ್ಯದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಆದರೆ ಹೊಸ ವರ್ಷಾಚರಣೆ ಪಾರ್ಟಿ, ಗೋವಾದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಪ್ರತಿದಿನ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚವಾಗುತ್ತಿರುವುದು ಕಂಡುಬರುತ್ತಿದೆ. ಮುಂಬಯಿಯಿಂದ ಗೋವಾಕ್ಕೆ ಹಡಗಿನ ಮೂಲಕ ಬಂದಿಳಿದ 2000 ಪ್ರಯಾಣಿಕರ ಪೈಕಿ ಹೆಚ್ಚಿನ ಜನರು ಕರೋನಾ ಬಾಧಿತರಾಗಿದ್ದಾರೆ ಎಂಬುದು ಇದೀಗ ಆತಂಕ ಸೃಷ್ಠಿಸಿದೆ. ಹಡಗಿನಲ್ಲಿರುವ ಎಲ್ಲ ಪ್ರಯಾಣಿಕರ ಖಡ್ಡಾಯ ತಪಾಸಣೆ ನಡೆಸುವಂತೆ ಗೋವಾ ಸರ್ಕಾರ ಸೂಚನೆ ನೀಡಿದೆ.