ಪಣಜಿ: ಗೋವಾದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದು, ರಾತ್ರಿ 11 ಗಂಟೆಯ ನಂತರ ಮದ್ಯ ಮಾರಾಟ ನಿಷೇಧಿಸಲಾಗಿದೆ.
ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಲ್ಲಿರುವ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ದಕ್ಷಿಣ ಗೋವಾ ಜಿಲ್ಲಾಧಿಕಾರಿ ರುಚಿಕಾ ಕಟ್ಯಾಲ್ ಆದೇಶದಲ್ಲಿ ತಿಳಿಸಿದ್ದು, ರಾತ್ರಿ 11 ಗಂಟೆಯ ನಂತರ ಮದ್ಯ ಮಾರಾಟ ಕಂಡುಬಂದರೆ ಮಾರಾಟ ಅಂಗಡಿಯ ಪರವಾನಗಿ ರದ್ಧುಗೊಳಿಸಲಾಗುವುದು, ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನ ಪ್ರಕರಣ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸದಿದ್ದರೂ ಕೂಡ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯಿಂದಾಗಿ ಕೆಲ ಕಠಿಣ ನಿರ್ಬಂಧಗಳು ಜಾರಿಗೊಂಡಿರುವುದು ಕೊರೊನ ನಿಯಂತ್ರಣಕ್ಕೂ ಸಣ್ಣ ಮಟ್ಟಿಗೆ ಸಹಕಾರಿಯಾಗುವ ಸಾಧ್ಯತೆಯಿದೆ.