Advertisement

ಬಾರ್ ಆರೋಪ : ಸ್ಮೃತಿ ಇರಾನಿ ವಿರುದ್ಧ ಮಾಡಿದ್ದು ಸಂಚು ಎಂದ ಹೈಕೋರ್ಟ್

07:54 PM Aug 01, 2022 | Team Udayavani |

ಹೊಸದಿಲ್ಲಿ: ಬಿಜೆಪಿ ನಾಯಕಿ ಸ್ಮೃತಿ ಇರಾನಿ ಮತ್ತು ಅವರ ಪುತ್ರಿಯ ವಿರುದ್ಧ ಕಾಂಗ್ರೆಸ್‌ ಮುಖಂಡರಾದ ಜೈರಾಮ್‌ ರಮೇಶ್‌, ಪವನ್‌ ಖೇರಾ, ನೆಟ್ಟಾ ಡಿಸೋಜಾ ಅವರು ಇತರರೊಂದಿಗೆ ಸೇರಿ ‘ಸುಳ್ಳು ಆರೋಪ ಮಾಡಿ ವೈಯಕ್ತಿಕ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

Advertisement

” ದಾಖಲೆಗಳನ್ನು ಪರಿಗಣಿಸಿದರೆ ಸ್ಮೃತಿ ಇರಾನಿ ಅಥವಾ ಅವರ ಮಗಳ ಪರವಾಗಿ ಯಾವುದೇ ಪರವಾನಗಿ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಇಬ್ಬರೂ ರೆಸ್ಟೋರೆಂಟ್‌ನ ಮಾಲೀಕರಲ್ಲ. ಪರವಾನಗಿಗಾಗಿ ಎಂದೂ ಅರ್ಜಿ ಸಲ್ಲಿಸಿಲ್ಲ” ಎಂದು ಕೋರ್ಟ್ ಹೇಳಿದೆ.

ಬಿಜೆಪಿ ನಾಯಕಿ ಇರಾನಿ ಮತ್ತು ಅವರ ಮಗಳನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕ ಅಪಹಾಸ್ಯಕ್ಕೆ ಒಳಪಡಿಸಲು ಮತ್ತು ನೈತಿಕ ಚಾರಿತ್ರ್ಯ ಮತ್ತು ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತರಲು ಕಾಂಗ್ರೆಸ್‌ನ ಮೂವರು ನಾಯಕರ ಹೇಳಿಕೆಯು “ನಿಂದೆಯ ಸ್ವರೂಪದಲ್ಲಿದೆ ಮತ್ತು ದುರುದ್ದೇಶಪೂರಿತ ಉದ್ದೇಶ, ಸುಳ್ಳಾಗಿದೆ” ಎಂದು ಹೈಕೋರ್ಟ್ ಹೇಳಿದೆ.

ನಾಗರಿಕ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮೂವರು ಕಾಂಗ್ರೆಸ್ ನಾಯಕರಿಗೆ ಜುಲೈ 29 ರಂದು ಸಮನ್ಸ್ ಜಾರಿಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸೋಮವಾರ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕೇಂದ್ರ ಸಚಿವರು ಮತ್ತು ಅವರ ಮಗಳ ವಿರುದ್ಧದ ಆರೋಪಗಳ ಕುರಿತು ಟ್ವೀಟ್‌ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕುವಂತೆಯೂ ಹೈಕೋರ್ಟ್ ಕೇಳಿದೆ.

ಮೂವರು ಕಾಂಗ್ರೆಸ್ ಮುಖಂಡರ ವಿರುದ್ಧ ಸ್ಮೃತಿ ಇರಾನಿ 2 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈರಾಮ್ ರಮೇಶ್, ಖೇರಾ ಮತ್ತು ನೆಟ್ಟಾ ಡಿಸೋಜಾ ಆಗಸ್ಟ್ 18ರಂದು ಕೋರ್ಟ್ ಗೆ ಹಾಜರಾಗುವಂತೆ ಆದೇಶ ನೀಡಿದೆ.

Advertisement

ಒಂದು ವೇಳೆ ಕಾಂಗ್ರೆಸ್ ಮುಖಂಡರು ಟ್ವೀಟ್ಸ್ ಗಳನ್ನು ತೆಗೆದುಹಾಕಲು ವಿಫಲರಾದರೆ, ಈ ಕಾರ್ಯವನ್ನು ಟ್ವೀಟರ್, ಫೇಸ್ ಬುಕ್ ಸಂಸ್ಥೆ ಮೂಲಕ ತೆಗೆದು ಹಾಕಬೇಕಾಗುತ್ತದೆ ಎಂದು ಕೋರ್ಟ್ ನಿರ್ದೇಶನ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next