ಪಣಜಿ: ಸೋಮವಾರ ಬೆಳಿಗ್ಗೆಯಿಂದ ಗೋವಾದಲ್ಲಿ ಲಾಕ್‍ಡೌನ್ ತೆರವುಗೊಳಿಸಿದ್ದರಿಂದ ರಾಜ್ಯಾದ್ಯಂತ ವಾಹನ ಸಂಚಾರ ಎಂದಿನಂತೆಯೇ ಆರಂಭಗೊಂಡಿದೆ.
ರಾಜ್ಯದಲ್ಲಿ ರಿವರ್ ಕ್ರೂಜ್, ವಾಟರ್ ಪಾರ್ಕ್, ಎಂಟರ್‍ಟೈನ್‍ಮೆಂಟ್ ಪಾರ್ಕ್, ಜಿಮ್, ಮಸಾಜ್ ಪಾರ್ಲರ್, ಸಲೂನ್, ಕ್ಯಾಸಿನೊ, ಬಾರ್, ಸ್ಪೋಟ್ಸ
ಬುಡೋಳಿ : ಲಾರಿ-ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಸಾವುಕಾಂಪ್ಲೆಕ್ಸ್, ಆಡಿಟೋರಿಯಂ, ಕಮ್ಯುನಿಟಿ ಹಾಲ್‍ಗಳನ್ನು ಹೊರತುಪಡಿಸಿ ಉಳಿದೆಲ್ಲ ಉದ್ಯೋಗ ವ್ಯವಹಾರಗಳು ಎಂದಿನಂತೆಯೇ ಆರಂಭಗೊಂಡಿದೆ.
ಗೋವಾ ರಾಜ್ಯಾದ್ಯಂತ ಖಾಸಗಿ ಮತ್ತು ಕದಂಬ ಸಾರಿಗೆ ಬಸ್‍ಗಳು ಎಂದಿನಂತೆಯೇ ಓಡಾಟ ಆರಂಭಿಸಿವೆ. ಲಾಕ್‍ಡೌನ್ ತೆರವುಗೊಳಿಸಿದರೂ ಕೂಡ ರಾಜ್ಯಾದ್ಯಂತ ಟಫ್ ರೂಲ್ಸ್ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದರು. ಆದರೆ ಬೇಕಾಬಿಟ್ಟಿಯಾಗಿ ಜನರು ಓಡಾಟ ನಡೆಸಿದ್ದರೂ ಕೂಡ ಟಫ್ ರೂಲ್ಸ್ ಮಾತ್ರ ಎಲ್ಲಯೂ ಕಂಡುಬಂದಿಲ್ಲ. ಹಲವು ಜನ ಅಂಗಡಿ ಮಾಲೀಕರು ತಾವೇ ಸ್ವಯಂಪ್ರೇರಣೆಯಿಂದ ಸೋಮವಾರವೂ ಕೂಡ ಅಂಗಡಿ ಮುಚ್ಚಿದ್ದರು.
ಇದನ್ನೂ ಓದಿ :
ಗೋವಾ ರಾಜ್ಯದಲ್ಲಿ ಲಾಕ್‍ಡೌನ್ ಮುಂದುವರೆಸಬೇಕು ಎಂದು ಪ್ರತಿಪಕ್ಷಗಳು ಪಟ್ಟುಹಿಡಿದಿವೆ. ಆದರೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಮಾತ್ರ ಲಾಕ್‍ಡೌನ್ ಮುಂದುವರೆಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಒಂದೆಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ, ಇದರಿಂದಾಗಿ ಸೋಂಕಿನ ನಿಯಂತ್ರಣ ಸಾಧ್ಯವಾಗದಿದ್ದರೆ ಮತ್ತೆ ಲಾಕ್‍ಡೌನ್ ಜಾರಿಗೊಳಿಸುವ ಭೀತಿ ಎದುರಾಗಿದೆ.