Advertisement

ಗೋವಾ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ಪೂರ್ವ ಸಿದ್ಧತೆಗಳು ಆರಂಭ

06:07 PM Aug 01, 2022 | Team Udayavani |

ಪಣಜಿ: ಗೋವಾದಲ್ಲಿ ಪ್ರತಿ ವರ್ಷ ನವೆಂಬರ್ 20 ರಿಂದ 28 ರವರೆಗೆ ಆಯೋಜಿಸಲಾಗುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು, ಪ್ರಸಕ್ತ 53 ನೇ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗಕ್ಕೆ ಪ್ರವೇಶಗಳು ಆರಂಭಗೊಂಡಿದೆ.

Advertisement

ಇಂಡಿಯನ್ ಪನೋರಮಾ ವಿಭಾಗದಲ್ಲಿ ಪ್ರಸ್ತುತಪಡಿಸಲಾದ ಪ್ರತಿಯೊಂದು ಚಲನಚಿತ್ರವು ಇಂಗ್ಲಿಷ್ ಉಪಶೀರ್ಷಿಕೆಗಳನ್ನು ಹೊಂದಿರಬೇಕು. ಚಲನಚಿತ್ರವು ಕಳೆದ ಹನ್ನೆರಡು ತಿಂಗಳೊಳಗೆ ಚಿತ್ರೀಕರಣಗೊಂಡಿರಬೇಕು ಅಥವಾ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಪ್ರಮಾಣೀಕರಣವನ್ನು ಪಡೆದಿರಬೇಕು. ಅಂದರೆ, 01 ಆಗಸ್ಟ್ 2021 ರಿಂದ 31 ಜುಲೈ 2022 ರ ನಡುವಿನ ಅವಧಿ. ಸಿಬಿಎಸ್‍ಸಿ ಪ್ರಮಾಣಪತ್ರ ಹೊಂದಿದ ಚಲನಚಿತ್ರಗಳು ಅರ್ಜಿ ಸಲ್ಲಿಸಬಹುದಾಗಿದೆ.

ಆನ್‍ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 18 ಕೊನೆಯ ದಿನವಾಗಿದೆ. ಆನ್‍ಲೈನ್ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಆಗಸ್ಟ್ 25 ರವರೆಗೆ ಅವಕಾಶ ನೀಡಲಾಗಿದೆ.

ಪ್ರತಿ ವರ್ಷ ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸುಮಾರು 60 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ. ಜಗತ್ತಿನ ವಿವಿಧ ದೇಶಗಳ 300 ಕ್ಕೂ ಹೆಚ್ಚು ಚಲನಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next