Advertisement

ಗೋವಾದಲ್ಲಿ ಪಕ್ಷಾಂತರ ಪರ್ವ: 5 ವರ್ಷಗಳಲ್ಲಿ 24 ಶಾಸಕರು ಜಂಪ್

05:07 PM Jan 14, 2022 | Team Udayavani |

ಪಣಜಿ: ರಾಜಕೀಯ ಬೆಳವಣಿಗೆಗಳಿಂದಾಗಿ ಸದಾ ಸುದ್ಧಿಯಾಗುವ ಗೋವಾದಲ್ಲ ಕಳೆದ 5 ವರ್ಷಗಳಲ್ಲಿ 24 ಶಾಸಕರು ಪಕ್ಷಾಂತರ ಮಾಡಿದ್ದಾರೆ.

Advertisement

ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಮೈಕಲ್ ಲೋಬೊ ರವರ ಕಾಂಗ್ರೇಸ್ ಪ್ರವೇಶದ ಬಗ್ಗೆ ಕಲಂಗುಟ್ ಕಾಂಗ್ರೆಸ್ ಸಮೀತಿಯ ಸದಸ್ಯರಾದ ಆಗ್ನೇಲ್ ಫರ್ನಾಂಡೀಸ್, ಜೋಸೆಫ್ ಸಿಕ್ವೇರಾ ಮತ್ತು ಆಂಟನಿ ಮೆನೆಜಸ್ ರವರು ಅಸಮಾಧಾನ ವುಕ್ತಪಡಿಸಿ ಟಿಎಂಸಿ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ಪಕ್ಷ ಸೋಲಿಸಲು ಏನು ಬೇಕಾದರೂ ಮಾಡಬೇಕು. ಒಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ನೀಡಿದ್ದ ಈ ಮೂವರು ಕಾಂಗ್ರೆಸ್ ಸಮೀತಿ ಸದಸ್ಯರು ಸೇರಿದಂತೆ ಸುಮಾರು 300 ಜನ ಬೆಂಬಲಿಗರೊಂದಿಗೆ ಗೋವಾ ತೃಣಮೂಲ ಕಾಂಗ್ರೆಸ್ ಉಸ್ತುವಾರಿ ಮಹುವಾ ಮೋಹಿತ್ರಾ ಮತ್ತು ಶಾಸಕ ಚರ್ಚಿಲ್ ಅಲೆಮಾಂವ ರವರ ಸಮ್ಮುಖದಲ್ಲಿ ಟಿಎಂಸಿ ಸೇರ್ಪಡೆಯಾಗಿದ್ದಾರೆ.

ಬಿಜೆಪಿಯನ್ನು ಸೋಲಿಸಲು ಬಿಜೆಪಿ ವಿರೋಧಿ ಪಕ್ಷಗಳು ಒಗ್ಗೂಡಬೇಕಾಗಿದೆ. ಇದರಿಂದಾಗಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳಿಗೆ ಲಾಭವಾಗಲಿದೆ ಎಂದು ಟಿಎಂಸಿ ಗೋವಾ ಉಸ್ತುವಾರಿ ಮಹುವಾ ಮೋಹಿತ್ರಾ ಹೇಳಿಕೆ ನೀಡಿದ್ದಾರೆ. ಗೋವಾ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಗೋವಾ ರಾಜಕೀಯದಲ್ಲಿ ನಡೆಯುತ್ತಿರುವ ಪಕ್ಷಾಂತರ ಯಾವಾಗ ನಿಲ್ಲಲಿದೆ ಎಂಬುದು ಸದ್ಯ ಚರ್ಚೆಯ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next