Advertisement

ಗೋವಾ:ನೂತನ ರಾಜಭವನ ನಿರ್ಮಾಣಕ್ಕೆ ನಿರ್ಮಾಣಕ್ಕೆ ರಾಜ್ಯಪಾಲರ ಒಪ್ಪಿಗೆ

03:05 PM Oct 10, 2021 | Team Udayavani |

ಪಣಜಿ: ಕೋಟ್ಯಂತರ ರೂ ಖರ್ಚಿನಲ್ಲಿ ಗೋವಾ ನೂತನ ರಾಜಭವನ ನಿರ್ಮಾಣಕ್ಕೆ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಮಂಜೂರಿ ನೀಡಿದ್ದಾರೆ.

Advertisement

ಈ ಕುರಿತ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಕರೋನಾ ಮಹಾಮಾರಿಯ ಆರ್ಥಿಕ ಸಂಕಷ್ಟಕರ ಪರಿಸ್ಥಿತಿಯಲ್ಲಿ ರಾಜಭವನ ನಿರ್ಮಾಣ ಮಾಡಿ ಅನಗತ್ಯ ಖರ್ಚು ಬೇಡ ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವರು ಈ ಪ್ರಸ್ತಾವವನ್ನು ರದ್ದುಗೊಳಿಸಿದ್ದರು.

ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಪರಿಸ್ಥಿತಿಯಿರುವ ಸಂದರ್ಭದಲ್ಲಿ ಕೋಟ್ಯಂತರ ರೂ ಖರ್ಚು ಮಾಡಿ ದುಂದುವೆಚ್ಛ ಮಾಡಿ ನೂತನ ರಾಜಭವನ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿರುವುದಕ್ಕೆ ಗೋವಾ ಕಾಂಗ್ರೇಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಕರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕೇವಲ ಭೃಂಷ್ಠಾಚಾರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಇಂತಹ ದೊಡ್ಡ ಯೋಜನೆಗೆ ಕೈಹಾಕಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next