Advertisement

ಅಮೆರಿಕ: ಭಾರತ ಮೂಲದ ಸಂಸದೆ ಪ್ರಮೀಳಾಗೆ ಬೆದರಿಕೆ

07:38 PM Sep 09, 2022 | Shwetha M |

ವಾಷಿಂಗ್ಟನ್‌: ಅಮೆರಿಕ ಸಂಸತ್‌ನ ಕೆಳಮನೆ, ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನ ಸಂಸದೆ,  ಭಾರತ ಮೂಲದ ಪ್ರಮೀಳಾ ಜಯಪಾಲ್‌ ಅವರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಅಮೆರಿಕ ಬಿಟ್ಟು ಭಾರತಕ್ಕೆ ತೊಲಗಿ ಎಂದು ಹೇಳುವಂತಹ ಕರೆಗಳು ಬಂದಿವೆ ಎಂದು ಪ್ರಮೀಳಾ ತಿಳಿಸಿದ್ದಾರೆ.

Advertisement

ಚೆನ್ನೈನಲ್ಲಿ ಜನಿಸಿರುವ ಅವರು  ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಸಿಯಾಟಲ್‌ ಅನ್ನು ಪ್ರತಿನಿಧಿಸುತ್ತಿರುವ ಪ್ರಮೀಳಾ ಅವರು ಗುರುವಾರ ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತಮಗೆ ಬಂದ ಐದು ಬೆದರಿಕೆ ಕರೆಗಳ ಆಡಿಯೋ ರೆಕಾರ್ಡ್‌ ಅನ್ನೂ ಹಂಚಿಕೊಂಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಪ್ರಮೀಳಾ ಅವರ ಮನೆ ಎದುರು ಓರ್ವ ವ್ಯಕ್ತಿ ಬಂದೂಕು ಹಿಡಿದು ನಿಂತಿದ್ದು ಕಂಡುಬಂದಿತ್ತು. ನಂತರ ಆತನನ್ನು ಬಂಧಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next