Advertisement

ಗೋ ಬ್ಯಾಕ್ ಮಹೇಶ್: ಕೊಳ್ಳೇಗಾಲದಲ್ಲಿ ಶಾಸಕರ ವಿರುದ್ಧ ಆಕ್ರೋಶ

09:03 PM Sep 18, 2022 | Team Udayavani |

ಕೊಳ್ಳೇಗಾಲ:ಮಾಜಿ ಸಚಿವ, ಶಾಸಕ ಎನ್.ಮಹೇಶ್ ರವರ ಹುಟ್ಟು ಬಡಾವಣೆಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿಗಳು ”ಗೋಬ್ಯಾಕ್ ಮಹೇಶ್, ಗೋಬ್ಯಾಕ್” ಎ೦ದು ಘೋಷಣೆ ಕೂಗಿದ್ದಾರೆ. ವಿಡಿಯೋ ಸಮಾಜಿಕ ಜಾಲ ತಾಣದಲ್ಲಿ ಭಾನುವಾರ ಭಾರಿ ಸದ್ದು ಮಾಡಿದೆ.

Advertisement

ಕಳೆದ ಶುಕ್ರವಾರ ಬಡಾವಣೆಯ ಮುಖ್ಯ ರಸ್ತೆ ಕಾಮಗಾರಿ ಕಳಪೆಯಾಗಿದೆ ಎ೦ದು ನಿವಾಸಿಗಳು ಪ್ರತಿಭಟನೆ ಮಾಡಿದ್ದರು. ಎನ್.ಮಹೇಶ್ ಅವರು ಅಧಿವೇಶನಲ್ಲಿದ್ದರು.

ಸ್ಥಳಕ್ಕೆ ಬಾರದ ಕಾರಣಕ್ಕೆ ಬೇಸರಗೊಂಡಿದ್ದ ಜನರು, ಎನ್.ಮಹೇಶ್ ಭಾನುವಾರ ಮುಂಜಾ ಬಡಾವಣೆಗೆ ಆಗಮಿಸಿದಾಗ ಸಿದ್ಧಪ್ಪಾಜಿ ದೇವಾಲಯದ ಮುಂದೆ ಸೇರಿದ್ದವರು ‘ಗೋ ಬ್ಯಾಕ್ ಮಹೇಶ್, ಗೋಬ್ಯಾಕ್” ಎ೦ದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next