Advertisement
ಲಕ್ಷದೀಪೋತ್ಸವ ಸಂದರ್ಭ ಅಮೃತ ವರ್ಷಿಣಿ ಸಭಾಭವನದಲ್ಲಿ ಸೋಮವಾರ ನಡೆದ ಸರ್ವಧರ್ಮ ಸಮ್ಮೇಳನದ 87ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಇಸ್ಕಾನ್‌ನ ವಿದ್ವಾಂಸ ಗೌರ್ ಗೋಪಾಲದಾಸ್ ಮಾತನಾಡಿ, ಭಾರತ 4-ಎಸ್ (ಸ್ಮಾರ್ಟ್, ಸೇವಿಂಗ್, ಸ್ಪೆಂಡಿಂಗ್)ಗಳು ಒಳಗೊಂಡು, ಸ್ಪಿರಿಚ್ಯು ವಾಲಿಟಿ- ಆಧ್ಯಾತ್ಮಿಕತೆಯ ಮೂಲಕ ಗುರುತಿಸಿಕೊಂಡಿದೆ ಎಂದು ಬಣ್ಣಿಸಿದರು.
Related Articles
Advertisement
ಉಪನ್ಯಾಸಜೀವನ ಮತ್ತು ಧರ್ಮದ ವಿಚಾರವಾಗಿ ಮೈಸೂರಿನ ಫೋಕಸ್ ಅಕಾಡೆಮಿಯ ಸಿಇಒ ಡಿ.ಟಿ. ರಾಮಾನುಜಮ್ ಉಪನ್ಯಾಸ ನೀಡಿದರು. ರಾಜಕೀಯ ಮತ್ತು ಭಾರತೀಯದ ವಿಚಾರವಾಗಿ ಮಂಗಳೂರಿನ ಕದ್ರಿ ನವನೀತ ಶೆಟ್ಟಿ ಮಾತನಾಡಿದರು. ಮಹಾತ್ಮಾ ಗಾಂಧೀಜಿ ವಿಚಾರವಾಗಿ ಬೊಳುವಾರ್ ಮಹಮ್ಮದ್ ಕುಂಞಿ ಉಪನ್ಯಾಸ ನೀಡಿದರು. ಹೇಮಾವತಿ ವೀ. ಹೆಗ್ಗಡೆ, ಸುರೇಂದ್ರ ಕುಮಾರ್, ಪ್ರೊ| ಎಸ್. ಪ್ರಭಾಕರ್ ಉಪಸ್ಥಿತರಿದ್ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಉಪನ್ಯಾಸಕ ಸುನಿಲ್ ಪಂಡಿತ್ ಸಮ್ಮಾನ ಪತ್ರ ವಾಚಿಸಿದರು.
ಕೇಶವ ಗೌಡ ಬೆಳಾಲು ವಂದಿಸಿದರು. ಡಾ| ಶ್ರೀಧರ ಭಟ್ ನಿರ್ವಹಿಸಿದರು.
ಲಕ್ಷದೀಪೋತ್ಸವದ ಅಂಗವಾಗಿ ಮೂರನೇ ದಿನ ಲಲಿತೋದ್ಯಾನ ಉತ್ಸವ ಮತ್ತು ರಥೋತ್ಸವ ರವಿವಾರ ನಡೆಯಿತು. ಇಂದು ಸಾಹಿತ್ಯ ಸಮ್ಮೇಳನ
ನ. 26ರಂದು ಸಂಜೆ 5ರಿಂದ ಸಾಹಿತ್ಯ ಸಮ್ಮೇಳನದ 87ನೇ ಅಧಿವೇಶನ ನಡೆಯಲಿದ್ದು, ಡಿಸಿಎಂ ಡಾ| ಅಶ್ವತ್ಥನಾರಾಯಣ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಡಾ| ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸುವರು. ಕುಮಟಾದ ಸಾಹಿತಿ ಶ್ರೀಧರ ಬಳಗಾರ, ಉಡುಪಿಯ ವೀಣಾ ಬನ್ನಂಜೆ ಮತ್ತು ವಾಗ್ಮಿ ರಿಚರ್ಡ್ ಲೂಯಿಸ್ ಉಪನ್ಯಾಸ ನೀಡುವರು. ಡಾ| ಹೆಗ್ಗಡೆ ಹುಟ್ಟುಹಬ್ಬ ತ್ರಿವೇಣಿ ಸಂಗಮ ಸಂಭ್ರಮ
ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಡಾ| ಹೆಗ್ಗಡೆಯವರ ಜನ್ಮದಿನ ಮತ್ತು ಸರ್ವಧರ್ಮ ಸಮ್ಮೇಳನ -ಈ ತ್ರಿವೇಣಿ ಸಂಗಮ ಧರ್ಮಸ್ಥಳದಲ್ಲಿ ಸೋಮವಾರ ವಿಶೇಷವಾಗಿತ್ತು. ಆಪ್ತರು ಮತ್ತು ಅಭಿಮಾನಿಗಳು ಡಾ| ಹೆಗ್ಗಡೆಯವರಿಗೆ ಫಲಪುಷ್ಪ ಅರ್ಪಿಸಿ ಶ್ರದ್ಧಾಭಕ್ತಿಯಿಂದ ಜನ್ಮದಿನದ ಶುಭಾಶಯ ಕೋರಿದರು. ಬೆಳ್ತಂಗಡಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅವರು ಹೆಗ್ಗಡೆಯವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಿದರು. ಇಂದು ಲಕ್ಷ ದೀಪೋತ್ಸವ
ಮಂಗಳವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದೆ. ಒಂದು ಲಕ್ಷಕ್ಕೂ ಮಿಕ್ಕಿ ಭಕ್ತರು ಸ್ವಾಮಿಯ ಕಣ್ತುಂಬಿಕೊಳ್ಳಲು ಆಗಮಿಸುವ ನಿರೀಕ್ಷೆಯಿದೆ. ಅನೇಕ ಮಂದಿ ಪಾದಯಾತ್ರೆಯಲ್ಲೂ ಬಂದು ಸೇರಲಿದ್ದಾರೆ.