ಗಂಗಾವತಿ: ಹೋಳಿ ಹಬ್ಬ ವೈಭವ ಮತ್ತು ಕಲರ್ ಫುಲ್ ಹಬ್ಬವಾಗಿದ್ದು ಗಂಗಾವತಿ ತಾಲೂಕಿನ ಆನೆಗೊಂದಿ, ಸಾಣಾಪೂರ, ಹನುಮನಹಳ್ಳಿ ಮತ್ತು ಜಂಗ್ಲಿ ರಂಗಾಪೂರ ಗ್ರಾಮಗಳ ಹೊಟೇಲ್‌ಗಳಲ್ಲಿ ತಂಗಿದ್ದ ದೇಶ ವಿದೇಶಿದ ಪ್ರವಾಸಿಗರು ಸ್ಥಳೀಯ ಜನರ ಜತೆಗೆ ಸೇರಿ ಬಣ್ಣದ ಹಬ್ಬ ಹೋಳಿಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.
ಈ ಮೊದಲು ವಿರೂಪಾಪೂರಗಡ್ಡಿಯಲ್ಲಿದ್ದ ರೆಸಾರ್ಟ್ ಗಳಲ್ಲಿ ವಿದೇಶಿ ಪ್ರವಾಸಿಗರು ಹೋಳಿ ಹಬ್ಬವನ್ನು ವೈಭವಪೂರ್ಣವಾಗಿ ಆಚರಣೆ ಮಾಡುವ ಪರಿಪಾಠವಿತ್ತು. ರೆಸಾರ್ಟ್ ಗಳನ್ನು ಜಿಲ್ಲಾಡಳಿತ ತೆರವು ಮಾಡಿದ ನಂತರ ಆನೆಗೊಂದಿ, ಸಾಣಾಪೂರ, ಹನುಮನಹಳ್ಳಿ ಮತ್ತು ಜಂಗ್ಲಿ ರಂಗಾಪೂರ ಗ್ರಾಮಗಳ ಹೊಟೇಲ್‌ಗಳಲ್ಲಿ ತಂಗಿರುವ ದೇಶಿಯ ಮತ್ತು ವಿದೇಶಿ ಟೆಕ್ಕಿಗಳು ಮತ್ತು ಪ್ರವಾಸಿಗರು ಹೋಳಿ ಹಬ್ಬಕ್ಕೆಂದೇ ಇಲ್ಲಿಗೆ ಕುಟುಂಬ ಸಮೇತರಾಗಿ ಆಗಮಿಸಿ ಡಿಜೆ ಸೌಂಡ್ ಮತ್ತು ಹಲಗಿ ಮತ್ತು ತಾಷಾ ವಾದ್ಯಗಳ ಮೂಲಕ ಗ್ರಾಮಗಳಲ್ಲಿ ಮೆರವಣ ಗೆಯಲ್ಲಿ ತೆರಳಿ ಪರಸ್ಪರ ಬಣ್ಣ ಹಚ್ಚಿಕೊಂಡು ಕುಣಿದು ಕುಪ್ಪಳಿಸಿ ಸಂತೋಷ ಪಟ್ಟರು. ಸ್ಥಳೀಯ ಯುವಕರು ಮತ್ತು ಹೋಟೇಲ್‌ಗಳ ಸಿಬಂದಿಗಳೂ ಸಹ ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.