Advertisement

ಸೆ. 26ರಿಂದ ಕುದ್ರೋಳಿಯಲ್ಲಿ ವೈಭವದ ದಸರಾ; ಮುಖ್ಯಮಂತ್ರಿಗೆ ಆಹ್ವಾನ

09:52 AM Sep 19, 2022 | Team Udayavani |

ಮಂಗಳೂರು: ಭಕ್ತರ ಮನದಾಸೆ ಯಂತೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿ ಮಂಗಳೂರು ದಸರಾ ಮಹೋತ್ಸವ ಸೆ. 26ರಿಂದ ಅ. 6ರವರೆಗೆ ವೈಭವಪೂರ್ಣವಾಗಿ ನಡೆಯಲಿದೆ ಎಂದು ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಮಲ್ಪೆ : ಆರಂಭಗೊಳ್ಳದ ಸೈಂಟ್‌ಮೇರಿ ದ್ವೀಪಯಾನ ; ಪ್ರವಾಸಿಗರಿಗೆ ನಿರಾಸೆ

ದಸರಾ ಮಹೋತ್ಸವ ಕುರಿತು ರವಿವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಂಗಳೂರು ದಸರಾಕ್ಕೆ ನಾನಾ ಜಿಲ್ಲೆ, ರಾಜ್ಯಗಳಿಂದ 10 ಲಕ್ಷಕ್ಕೂ ಅಧಿಕ ಮಂದಿ ಬರುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ ಸಿದ್ಧತೆಗಳಾಗುತ್ತಿವೆ. ಪ್ರತೀ ದಿನ ಧಾರ್ಮಿಕ ಸೇವೆಗಳ ಜತೆಗೆ ಅನ್ನದಾನ ಇರಲಿದೆ. ಭಕ್ತರ ಅನುಕೂಲಕ್ಕಾಗಿ ಈ ಬಾರಿ ಚಂಡಿಕಾ ಯಾಗವನ್ನು ಗಾಜಿನ ಮನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.

ಮುಖ್ಯಮಂತ್ರಿಗೆ ಆಹ್ವಾನ
ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು. ಆಮಂತ್ರಣ ಪತ್ರಿಕೆ ಯನ್ನು ಅವರಿಗೆ ಕಳುಹಿಸಿ ಕೊಟ್ಟು ಸ್ವತಃ ನಾನೇ ಆಹ್ವಾನಿ ಸುತ್ತೇನೆ. ಅವರ ಸಮಯ ವನ್ನು ಗೊತ್ತುಪಡಿಸಿ ಉದ್ಘಾಟನೆ ಸಮಯ ನಿಗದಿಪಡಿಸಲಾಗುವುದು ಎಂದರು.

ಶಾರದೆಗೆ ರಜತಪೀಠ
ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಅವರು ಮಾತನಾಡಿ, “ಮಂಗಳೂರು ದಸರಾ’ದ ಶಾರದೆಗೆ ಈ ಬಾರಿ 12 ಲಕ್ಷ ರೂ. ವೆಚ್ಚದಲ್ಲಿ 12 ಕೆ.ಜಿ. ತೂಕದ ರಜತ ಪೀಠವನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾದಳ ಮತ್ತು ಭಕ್ತರ ಸೇವೆಯಾಗಿ ಪುತ್ತೂರಿನಲ್ಲಿ ನಿರ್ಮಿಸಲಾಗುತ್ತಿದೆ. ಸೆ. 24ರಂದು ಸಮರ್ಪಣೆ ನಡೆಯಲಿದೆ. ಭಕ್ತರೊಬ್ಬರು ಬೆಳ್ಳಿಯ ವೀಣೆಯನ್ನು ಕಾಣಿಕೆಯಾಗಿ ನೀಡಲಿದ್ದಾರೆ ಎಂದರು. ಭಕ್ತರ ಅನುಕೂಲ ಕ್ಕಾಗಿ ಮೆರವಣಿಗೆಯಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆ ಮಾಡಿರುವುದಾಗಿ ಅವರು ತಿಳಿಸಿದರು.

Advertisement

ಮೇಯರ್‌ ಜಯಾನಂದ ಅಂಚನ್‌, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಉಪಾಧ್ಯಕ್ಷೆ ಊರ್ಮಿಳಾ ರಮೇಶ್‌, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ ಮಿಜಾರು, ಕೆ. ಮಹೇಶ್ಚಂದ್ರ, ಎಂ. ಶೇಖರ್‌ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ. ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ರಮಾನಾಥ್‌ ಕಾರಂದೂರು, ಶೈಲೇಂದ್ರ ವೈ. ಸುವರ್ಣ, ಎಚ್‌.ಎಸ್‌. ಜಯರಾಜ್‌, ಕೃತಿನ್‌ ಡಿ. ಅಮೀನ್‌, ಚಂದನ್‌ದಾಸ್‌ ಮೊದಲಾದವರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next