ಹೊಸದಿಲ್ಲಿ: ಪ್ರಖ್ಯಾತ “ಟೈಮ್’ ನಿಯತಕಾಲಿಕೆಯ ಮುಖಪುಟದಲ್ಲಿ ಬಾಲಿವುಡ್ ತಾರೆ ದೀಪಿಕಾ ಪಡು ಕೋಣೆ ಮಿಂಚುತ್ತಿದ್ದಾರೆ. ವಿಶೇಷ ಶೈಲಿಯ ಸೂಟ್‌ನಲ್ಲಿ ಅವರ ಚಿತ್ರ ಎಲ್ಲರನ್ನು ಆಕರ್ಷಿಸುತ್ತಿದೆ. “ದಿ ಗ್ಲೋಬಲ್ ಸ್ಟಾರ್: ದೀಪಿಕಾ ಪಡುಕೋಣೆ ಈಸ್ ಬ್ರಿಂಗಿಂಗ್ ದಿ ವರ್ಲ್ಡ್ ಟು ಬಾಲಿವುಡ್’ ಎಂದು ಈ ಲೇಖನಕ್ಕೆ ಅಡಿಬರಹ ನೀಡಲಾಗಿದೆ.
ಮಾರುಕಟ್ಟೆಗೆ ಬಿಡುಗಡೆಯಾದ ಮೇ ತಿಂಗಳ ಟೈಮ್ ನಿಯತಕಾಲಿಕೆಯ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಕೆಲವು ವಿವಾದಗಳ ಬಗ್ಗೆ ಪ್ರಸಾವಿಸಿ ದ್ದಾರೆ. ಇತಿಹಾಸ ಆಧಾರಿತ “ಪದ್ಮಾವತ್’ ಸಿನೆಮಾ ವಿವಾದ, ತಮ್ಮ ಮೊದಲ ನಿರ್ಮಾಣದ ಚಿತ್ರ “ಛಪಾಕ್’ ಬಿಡುಗಡೆ ಜೆಎನ್‌ಯು ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದ್ದರ ಬಗ್ಗೆ ಮಾತ ನಾಡಿದ್ದಾರೆ.
ನಟ ಶಾರುಖ್ ಖಾನ್ ಅವರೊಂದಿಗೆ ನಟಿಸಿದ “ಪಠಾಣ್’ ಸಿನೆಮಾದಲ್ಲಿ ಕೇಸರಿ ವಸ್ತ್ರದ ಬಿಕಿನಿ ಧರಿಸಿದ್ದರ ಕುರಿತೂ ಮನಬಿಚ್ಚಿ ಮಾತ ನಾಡಿದ್ದಾರೆ. ಇತ್ತೀಚೆಗೆ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ “ನಾಟು ನಾಟು’ ಹಾಡು ಕುರಿತು ಸಭಿಕರಿಗೆ ಪರಿಚಯ ಮಾಡಿಕೊಟ್ಟಿದ್ದರು.