Advertisement
Related Articles
Advertisement
ಗೌರವ ಅತಿಥಿಗಳಾಗಿ ಬೊರಿವಿಲಿ ಲೋಕಸಭಾ ಸಂಸದ ಗೋಪಾಲ್ ಸಿ. ಶೆಟ್ಟಿ, ಬಂಟ್ಸ್ ಸಂಘ ಬೆಂಗಳೂರು ಅಧ್ಯಕ್ಷ ಚಂದ್ರಹಾಸ ರೈ, ಬಂಟ್ಸ್ ಸಂಘ ಪುಣೆ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ, ಬಂಟ್ವಾಳ ಬಂಟರ ಸಂಘ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಬಂಟ್ಸ್ ಸಂಘ ಮೈಸೂರು ಅಧ್ಯಕ್ಷ ಪ್ರಭಾಕರ ಶೆಟ್ಟಿ, ಯುಎಇ ಬಂಟ್ಸ್ ಸಂಘದ ಅಧ್ಯಕ್ಷ ಸರ್ವೋತ್ತಮ ಎಸ್. ಶೆಟ್ಟಿ, ಬಂಟ್ಸ್ ಸಂಘ ಬಹರೇನ್ ಅಧ್ಯಕ್ಷ ಕೆ. ನಾಗೇಶ್ ಶೆಟ್ಟಿ, ಬಂಟ್ಸ್ ಸಂಘ ಓಮನ್ ಅಧ್ಯಕ್ಷ ಶಶಿಧರ ಶೆಟ್ಟಿ, ಜವಾಬ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಬಂಟ್ಸ್ ಸಂಘ ನಾಸಿಕ್ ಅಧ್ಯಕ್ಷ ಕರುಣಾಕರ ಶೆಟ್ಟಿ, ಬಂಟ್ಸ್ ಸಂಘ ಪಿಂಪ್ರಿ-ಚಿಂಚಾÌಡ್ ಅಧ್ಯಕ್ಷ ಮಹೇಶ್ ಹೆಗ್ಡೆ ಕಟ್ಟಿಂಗೇರಿ, ಬಂಟ್ಸ್ ಪೋರಂ ಮೀರಾ-ಭಯಂಧರ್ ಅಧ್ಯಕ ಜಯಪ್ರಕಾಶ್ ಭಂಡಾರಿ, ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷ ನಾರಾಯಣ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕುಶಲ್ ಸಿ. ಭಂಡಾರಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಮೀರಾ-ಡಾಹಾಣು ಬಂಟ್ಸ್ ಅಧ್ಯಕ್ಷ ಅರವಿಂದ್ ಶೆಟ್ಟಿ, ಬಂಟ್ಸ್ ಸಂಘ ಮೂಲ್ಕಿ ಅಧ್ಯಕ್ಷ ಎಳತ್ತೂರುಗುತ್ತು ಸಂತೋಷ್ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಬಂಟ್ಸ್ ಸಂಘ ಅಹ್ಮದಾಬಾದ್ ಅಧ್ಯಕ್ಷ ಅಪ್ಪು ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಮಹಿಳಾಧ್ಯಕ್ಷೆ ಆಶಾ ಜ್ಯೋತಿ ರೈ ಮಾಲಾಡಿ, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಉದಯ ಕೆ. ಶೆಟ್ಟಿ, ಉದ್ಯಮಿಗಳಾದ ಶಂಕರ ಬಿ. ಶೆಟ್ಟಿ ವಿರಾರ್, ಶಶಿಧರ ಕೆ. ಶೆಟ್ಟಿ ಇನ್ನಂಜೆ ನಲಾಸೊಪರ, ಸಂಜೀವ ಎನ್. ಶೆಟ್ಟಿ ನೆರೂಲ್, ಹರೀಶ್ ಶೆಟ್ಟಿ ಗುರ್ಮೆ ನಲಾಸೊಪರ, ಹರೀಶ್ ಪಾಂಡು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ಗೌರವ ಕೋಶಾಧಿಕಾರಿ ಕೊಲಾಡಿ ಬಾಲಕೃಷ್ಣ ರೈ, ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಯುವ ವಿಭಾಗದ ಅಧ್ಯಕ್ಷ ಶರತ್ ವಿ. ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಶಾಂತರಾಮ ಬಿ. ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಸಲಹಾ ಸಮಿತಿ ಕಾರ್ಯನಿರತ ಕಾರ್ಯಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ಕಾರ್ಯಕ್ರಮ ಸಮಿತಿ ಯುವ ಸಂಯೋಜಕ ಗಿರೀಶ್ ಶೆಟ್ಟಿ ತೆಲ್ಲಾರ್ ಸೇರಿದಂತೆ ವಿವಿಧ ಉಪ ಸಮಿತಿಗಳ ಮುಖ್ಯಸ್ಥರು, ಸಂಘದ ಹಾಲಿ-ಮಾಜಿ ಪದಾಧಿಕಾರಿಗಳು, ಸಮಾಜದ ಗಣಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮನ್‌ಮೋಹನ್ ಆರ್. ಶೆಟ್ಟಿ ಮತ್ತು ಶಶಿ ಮನ್‌ಮೋಹನ್ ಶೆಟ್ಟಿ ಹಾಗೂ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳನ್ನು ಅಭಿನಂದಿಸಲಾಯಿತು. ಅಜಿತ್ ಕುಮಾರ್ ರೈ ಮಾಲಾಡಿ ಮತ್ತು ಆಶಾ ಜ್ಯೋತಿ ರೈ ಹಾಗೂ ಪದ್ಮನಾಭ ಎಸ್. ಪಯ್ಯಡೆ ಮತ್ತು ಮಾಲಿನಿ ಪದ್ಮನಾಭ್ ಎಸ್. ಪಯ್ಯಡೆ ಇವರನ್ನು ಗೌರವಿಸಲಾಯಿತು. ಅತಿಥಿಗಳನ್ನು ಚಿನ್ನದ ಅರಿವಾಣದಲ್ಲಿ ಅಡಿಕೆ, ವೀಳ್ಯದೆಲೆ, ರಥದ ಸ್ಮರಣಿಕೆ ನೀಡಿ ಸತ್ಕರಿಸಿ ಗೌರವಿಸಲಾಯಿತು. ಆದಿಯಲ್ಲಿ ಬಂಟರ ಸಂಘದ ಜ್ಞಾನ ಮಂದಿರದಲ್ಲಿನ ಶ್ರೀ ಮಹಾವಿಷ್ಣು ಹಾಗೂ ಗಣಪತಿ ದೇವರಿಗೆ ಪೂಜೆ ನೆರವೇರಿಸಿ ಸಮ್ಮೇಳನಕ್ಕೆ ವಿಧಿವತ್ತಾಗಿ ಚಾಲನೆ ನೀಡಲಾಯಿತು.ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಅನುಗ್ರಹಿಸಿದರು. ಕಲಾಜಗತ್ತು ತೋನ್ಸೆ ವಿಜಯಕುಮಾರ್ ಶೆಟ್ಟಿ ಪ್ರವೇಶ ದ್ವಾರದಲ್ಲಿದ್ದೇ ಸಂಪ್ರದಾಯಿಕ ಸುಖಾಗಮನ ಬಯಸಿದರು. ಸುರೇಶ್ ಶೆಟ್ಟಿ ಶಿಬರೂರು ಪ್ರಾರ್ಥನೆಗೈದರು. ಬಂಟಗೀತೆಯೊಂದಿಗೆ ಸಮ್ಮೇಳನ ಪ್ರಾರಂಭಗೊಂಡಿತು. ಕಾರ್ಯಕ್ರಮ ಸಮಿತಿಯ ಸಂಚಾಲಕ ಉಳೂ¤ರು ಮೋಹನದಾಸ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಶೋಕ್ ಪಕ್ಕಳ ಮತ್ತು ಕು| ಸನ್ನಿಧಿ ಹರೀಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ದೇಶ-ವಿದೇಶಗಳಿಂದ ನೂರಾರು ಬಂಟ ಮಹಾನೀಯರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಂತರದಲ್ಲಿ ಬಂಟ ಸಮಾಜದ ಸುಮಾರು 19 ತಂಡಳಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು. ಬಂಟರ ನಡಿಗೆ ಬಂಟರ ಭವನದೆಡೆಗೆ….!
ಶನಿವಾರ ವಿಶ್ವದ ಬಂಟ ಸಂಘ-ಸಂಸ್ಥೆಗಳು ಮುಂಬಯಿ ಬಂಟರ ಭವನದತ್ತ ಮುಖಮಾಡಿದ್ದು ಸುಳ್ಳಲ್ಲ. ಇದಕ್ಕೆ ಕಿಕ್ಕಿರಿದು ತುಂಬಿದ ಸಭಾಗೃಹವೇ ಸಾಕ್ಷಿಯಾಗಿದೆ. ಸಮ್ಮೇಳನದ ಮಧ್ಯಾಂತರದಲ್ಲಿ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ “ಬಂಟರ ನಡಿಗೆ ಪ್ರಗತಿಯೆಡೆಗೆ’ ವಿಚಾರಗೋuಷಿ ನಡೆಯಿತು. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ, ಎಸ್‌ಡಿಪಿಸಿ ಕಟೀಲು ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಶೆಟ್ಟಿ, ಹೊಸದಿಲ್ಲಿಯ ಹೆಸರಾಂತ ಸಮಾಜ ಸೇವಕ ವಸಂತ್ ಶೆಟ್ಟಿ ಬೆಳ್ಳಾರೆ, ಎಸ್‌ಎಂ ಶೆಟ್ಟಿ ಕಾಲೇಜು ಪೊವಾಯಿ ಪ್ರಾಂಶುಪಾಲ ಡಾ| ಶ್ರೀಧರ ಎಸ್. ಶೆಟ್ಟಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಮಂಡಿಸಿದರು. ಒಟ್ಟಿನಲ್ಲಿ ಬಂಟರ ನಡಿಗೆ ಬಂಟರ ಭವನದೆಡೆಯಿಂದ ಬಂಟರ ನಡಿಗೆ ಪ್ರಗತಿಯೆಡೆಗೆ ಸಾಗುವುರದಲ್ಲಿ ಸಮಾವೇಶವು ಯಶಕಂಡಿತು. ಬಂಟ ಸಂಸ್ಕೃತಿಯನ್ನು ಸಾರಿದ ಸಮಾವೇಶ
ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ (ತುಂಗಾ) ಸೋಶಿಯಲ್ ವೆಲ್ಫೆàರ್ ಅನೆಕ್ಸ್ ಕಟ್ಟಡದ ಆವರಣದಲ್ಲಿ ತುಳುನಾಡ ಸಂಸ್ಕೃತಿ ಬಿಂಬಿಸುವ ವೈಭವೋಪೇತ ಎಳತ್ತೂರು ಗುತ್ತಿನ ಮನೆಯ ಮುಖ್ಯದ್ವಾರದಿಂದಲೇ ಚಿತ್ತೆ$çಸಿನ ಆಮಂತ್ರಿತರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಬಯಸಲು ಸುಧಾಕರ ಸಾಲ್ಯಾನ್ ಸಂಕಲಕರಿಯ ಏಳಿಂಜೆ ಇವರ ಪ್ರತಿಷ್ಠೆಯ ಕಂಬಳದ ಕೋಣಗಳ ಪ್ರತಿರೂಪಗಳು ಎಲ್ಲರನ್ನು ಒಮ್ಮೆ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು. ಇನ್ನೊಂದೆಡೆ ಗುತ್ತಿನ ಮನೆಯನ್ನು ಕಾಯುವ ರಾಟ್‌ವಿಲ್ಹಾರ್ ನಾಯಿ ಬೌಬೌ ಬೊಗಳುತ್ತಾ ಮನೆ ಯಜಮಾನನಿಗೆ ನೆಂಟರು ಆಗಮನದ ಮುನ್ಸೂಚನೆ ನೀಡುತ್ತಿತ್ತು. ಅಂಗಳದಲ್ಲಿನ ಗಿಡಕ್ಕೆ ಕಟ್ಟಿದ್ದ ಅಂಕದ ಕೋಳಿಗಳೆರಡು ಕೊಕ್ಕೋ…ಕೋ…ಕ್ಕೋ ಎನ್ನುತ್ತಾ ಮನೆಯೊಡತಿಯನ್ನು ಕರೆಯುತ್ತಿದ್ದವು. ಸಹೋದರರ ಸವಾಲ್….
ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ತನ್ನ ಸಹೋದರ ಮುಂಡಪ್ಪ ಪಯ್ಯಡೆಗೆ ಹಾಗೂ ವಿಶ್ವ ಬಂಟ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ತನ್ನ ಸಹೋದರ ಐಕಳ ಗುಣಾಪಾಲ್ ಶೆಟ್ಟಿ ಅವರನ್ನು ಸ್ಮರಣಿಕೆಯನ್ನಿತ್ತು ಗೌರವಿಸಿರುವುದು ಕೂಡು ಕುಟುಂಬಕ್ಕೆ ಸಾಕ್ಷಿ ಎಂಬಂತಿತ್ತು. ಇವರಂತೆ ಇನ್ನೂ ಅನೇಕ ಮಂದಿ ಸಹೋದರ ವರ್ಯರು ಸಮುದಾಯದ ಏಕತೆ, ಸರ್ವೋಭಿವೃದ್ಧಿಗೆ ಸಮ್ಮೇಳನದಲ್ಲಿ ಪರಸ್ಪರ ಸೇವಾ ನಿರತರಾಗಿರುವುದು ಎಲ್ಲರಲ್ಲೂ ಹರ್ಷವನ್ನು ಮೂಡಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದಕ್ಕೊಂದು ನೀತಿ- ಬೋಧಕವಾಗಿದ್ದು ವಿಶೇಷವಾಗಿ ತಮ್ಮ ಮಕ್ಕಳನ್ನು ಕೌಟುಂಬಿಕವಾಗಿ ಬೆಳೆಸಿ ಸಂಸ್ಕಾರವನ್ನು ರೂಪಿಸುವಲ್ಲಿ ಎಚ್ಚರಿಸುವಂತಿದ್ದವು. ಪರದೇಶ ವ್ಯಾಮೋಹಕ್ಕಿಂತ ಸ್ವದೇಶಿ ಬದುಕಿನೊಂದಿಗೆ ಬಾಂಧ್ಯವನ್ನು ಮೈಗೂಡಿಸಿ ಬಾಳುವ ಸಂದೇಶ ನೀಡುವಂತಿದ್ದವು. ಒಟ್ಟಿನಲ್ಲಿ ಮುಂಬಯಿ ಬಂಟ ಸಮಾಜದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಮಾವೇಶವೊಂದನ್ನು ಸಮಾಜ ಬಾಂಧವರು ಕಣ್ತುಂಬಿಕೊಂಡು ಐಕಳ ಹರೀಶ್ ಶೆಟ್ಟಿ ಸಂಘಟನಾ ಚಾತುರ್ಯಕ್ಕೆ ಮತ್ತೂಮ್ಮೆ ಸಾಕ್ಷಿಯಾದರು. ಕೈ ಬೀಸಿ ಕರೆಯುತ್ತಿದ್ದ ಬಾವಿಕಟ್ಟೆ…
ಬಂದ ಅತಿಥಿಗಳು ಕಟ್ಟಿಟ್ಟ ತುಳುವರ ಸಾಂಪತ್ತಿಕ ಬದುಕು ಬಿಂಬಿಸುವ ತುಪ್ಪೆ (ಕಣಜ)ಯನ್ನು ಕಂಡು ಮನೋಲ್ಲಾಸ ಪಡೆದು, ಪಕ್ಕದಲ್ಲಿನ ಬಾವಿ ಕಟ್ಟೆಯತ್ತ ತೆರಳಿ ತಿಳಿ ನೀರನ್ನು ನೋಡಿ ರಾಟೆಯ ಮೂಲಕ ನೀರನ್ನೆಳೆದು ಕೈಕಾಲುಗಳನ್ನು ತೊಳೆದು, ತುಳಸಿ ಕಟ್ಟೆಗೆ ನಮಿಸಿ ನಡೆಯುತ್ತಿದ್ದಂತೆಯೇ ಗುತ್ತಿನ ಮನೆಯಂಗಳದಲ್ಲೇ ಸ್ತ್ರೀಯರು ಹಣೆಗೆ ಕುಂಕುಮ ಹಚ್ಚಿ, ಮಂಗ್ಳೂರು ಮಲ್ಲಿಗೆ ಮುಡಿಸಿ ಬರಮಾಡಿಕೊಳ್ಳುತ್ತಿದ್ದ ದೃಶ್ಯವು ರೋಮಾಂಚನಗೊಳಿಸುತ್ತಿತ್ತು. ಗುತ್ತಿನ ಮನೆಯೊಳಗೆ ಪ್ರವೇಶಿಸಿದ ಅತಿಥಿಗಳು ಅಲ್ಲಿನ ತುಳುವರ ಆರಾಧ್ಯದೈವ-ದೇವರ ಗುಡಿ (ಸಾಣ) ಗೆ ನಮಿಸಿ ಕುಶಲೋಪರಿಯನ್ನು ನಡೆಸುವ ರೀತಿ ಯುವ ಪೀಳಿಗೆ ಮಾದರಿಯಾಗಿತ್ತು. ಪ್ರತಿಷ್ಠೆಯ ಅಂಗಳದ ಘನತೆ, ಗುತ್ತಿನ ಮನೆಯತ್ತ ನೋಡಿದರೆ ಹಲವು ಸ್ಥಿತ್ಯಾಂತರಗಳಿಗೆ ಕಾರಣವಾಗಿರುವ ಚಾವಡಿ ಒಂದೆಡೆಯಾದರೆ, ವಿಠಲ ಎಸ್. ಆಳ್ವ ಅವರ ಕ್ರಮಬದ್ಧವಾದ ಆಸನ ವ್ಯವಸ್ಥೆ ಗಣ್ಯರ ಮೆಚ್ಚುಗೆ ಪಾತ್ರವಾಯಿತು. ಚೆಂಡೆ-ವಾದ್ಯಗಳ ನೀನಾದದೊಂದಿಗೆ ಶಿಸ್ತು-ಬದ್ಧವಾದ ಸ್ವಾಗತ, ಊಟೋಪಚಾರ ಇತ್ಯಾದಿಗಳೊಂದಿಗೆ ರಂಗೇರಿದ ಸಮ್ಮೇಳನವಂತೂ ಪ್ರಶಂಸನೀಯ. ಭೀಮ ಬಲ ನೀಡುವ ಅತ್ಯಾಕರ್ಷಕ “ಗಧೆ’ಯನ್ನು ಸಮ್ಮೇಳನ ಸ್ಮರಣಾರ್ಥ ಚಿಹ್ನೆಯಾಗಿ ನೀಡಿ ಗೌರವಿಸಿದ್ದು ಮತ್ತೂಂದು ವಿಶೇಷತೆಯಾಗಿತ್ತು. ಇವೆಲ್ಲವೂ ಐಕಳ ಹರೀಶ್ ಅವರ ಸಂಘಟನಾ ಚಾತುರ್ಯತೆಗೆ ಕೈಗನ್ನಡಿಯಾಗಿತ್ತು. ಈ ಮಧ್ಯೆ ಮಕ್ಕಳಿಗಾಗಿ ರಚಿಸಿದ ಇಳಿಜಾರು ಬಂಡಿ ಮನೋಲ್ಲಾಸ ನೀಡಿತು. ಸಮಗ್ರ ಬಂಟ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ ಬಂಟರ ಐಕ್ಯತೆ ಮತ್ತು ಸಮಾಜೋದ್ಧಾರವನ್ನು ಸಮ್ಮೇಳನದ ಮುಖ್ಯ ಉದ್ದೇಶ ವಾಗಿರಿಸಿಕೊಂಡು ಇತಿಹಾಸ ಕಾರ್ಯಕ್ರಮ ಮಾಡಬೇಕು ಎನ್ನುವ ಆಶಯ ನನ್ನಲ್ಲಿತ್ತು. ಇಂತಹ ಮಹಾನ್ ಕನಸು ನನಸಾಗಿಸಿದ ಅಭಿಮಾನ ಇಂದು ಫಲಿಸಿದಂತಾಗಿದೆ. ಅಧ್ಯಕ್ಷಪದ ಅಲಂಕರಿಸುವುದು ಸುಲಭ ಆದರೆ ಅದರಲ್ಲಿನ ಜವಾಬ್ದಾರಿಗಳು ಅನೇಕ. ನಾನು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷನಾಗುವ ಸಮಯದಲ್ಲಿ ಅಂದಿನ ನಿಕಟಪೂರ್ವ ಅಧ್ಯಕ್ಷ ಸುಧಾಕರ ಹೆಗ್ಡೆ ಅವರು ದಾನ ದಾಡುವುದು ಸುಲಭ ಆದರೆ ಅಧ್ಯಕ್ಷ ಹುದ್ದೆ ವಹಿಸುವುದು ಬಹಳ ಕಷ್ಟ ಎಂದಿದ್ದರು. ಇಂದು ದಾನಿಗಳ ಪ್ರೋತ್ಸಾಹದಿಂದ ದತ್ತಿನಿಧಿಯನ್ನು ಸ್ಥಾಪಿಸಿ ನಾವೂ ಬಡ ಮಕ್ಕಳಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ನಾವು ಕೆಲವು ಗಣ್ಯವ್ಯಕ್ತಿಗಳಿಗೆ ಆಹ್ವಾನಿಸಲು ಹೋದಾಗ ಅವರು ಪ್ರೋತ್ಸಾಹಿಸಿದ್ದಾರೆ. ಈ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಲೋಪದೋಷ ಬಾರದ ಹಾಗೆ ನಾನು ನಡೆದುಕೊಳ್ಳುತ್ತೇನೆ. ನನ್ನ ಮುಂದಿನ ಮೂರು ವರ್ಷದ ಅವಧಿಯಲ್ಲಿ ಯಾರು ಮಾಡದ ಕೆಲಸಗಳನ್ನು ಮಾಡುವ ಉದ್ದೇಶವನ್ನು ಹೊಂದಿದ್ದೇನೆ. ತಮ್ಮೆಲ್ಲರ ಸಹಕಾರದಿಂದ ನನ್ನ ಯೋಜನೆ-ಯೋಚನೆಗಳನ್ನು ಪೂರೈಸುವೆ. ಒಕ್ಕೂಟದಲ್ಲಿ ಆದಾಯವಿಲ್ಲ. ಅದಕ್ಕಾಗಿ ಸದಸ್ಯತ್ವ ಮತ್ತು ಶಾಶ್ವತ ನಿಧಿ ದಾನಿಗಳಾಗಿ ಪ್ರೋತ್ಸಾಹ ನೀಡಬೇಕು. ಆ ಮೂಲಕ ಗ್ರಾಮೀಣ ಪ್ರದೇಶದ ಬಂಟರ ಸಂಘಗಳ ಏಳಿಗೆಯನ್ನು ಅರ್ಥಪೂರ್ಣವಾಗಿಸೋಣ. ಸಹಕಾರ ನೀಡಿದ ಎಲ್ಲಾ ಪ್ರಾಯೋಜಕರು, ದಾನಿಗಳು, ಪಾಲ್ಗೊಂಡ ಸರ್ವರಿಗೂ ಕೃತಜ್ಞತೆಗಳು
ಐಕಳ ಹರೀಶ್ ಶೆಟ್ಟಿ
(ಅಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ). ಚಿತ್ರ-ವರದಿ : ರೋನ್ಸ್ ಬಂಟ್ವಾಳ್