Advertisement

ಇಂದು “ಗ್ಲೋಬಲ್‌ ಗೋಲ್ಸ್‌ ರನ್‌’ ಕಾರ್ಯಕ್ರಮ

11:34 PM May 13, 2023 | Team Udayavani |

ಮಣಿಪಾಲ: ಭಾರತದ 30 ನಗರಗಳು ಸಹಿತವಾಗಿ ವಿಶ್ವದ 110ಕ್ಕೂ ಅಧಿಕ ದೇಶಗಳಲ್ಲಿ ಯುವ ಪೀಳಿಗೆ ನಡುವೆ ಸರಕಾರೇತರ ಸಂಸ್ಥೆಯಾಗಿ (ಎನ್‌ಜಿಒ) ಕಾರ್ಯನಿರ್ವಹಿಸುತ್ತಿರುವ ಎಐಇಎಸ್‌ಇಸಿ ವತಿಯಿಂದ ಮಾಹೆ ವಿ.ವಿ.ಯಲ್ಲಿ ಗ್ಲೋಬಲ್‌ ಗೋಲ್ಸ್‌ ರನ್‌ -2023 ಆಯೋಜಿಸಿದೆ.

Advertisement

ಮೇ 14ರ ಬೆಳಗ್ಗೆ 5.30ಕ್ಕೆ ಮಣಿಪಾಲದ ಎಜು ಕಟ್ಟಡ ಸಮೀಪದಿಂದ ಗ್ಲೋಬಲ್‌ ಗೋಲ್ಸ್‌ ರನ್‌ (ಜಿಜಿಆರ್‌) ಆರಂಭವಾಗಲಿದೆ. ತಾಯಂದಿರ ದಿನದಂದು ನಡೆಯುವ ಈ ಕಾರ್ಯಕ್ರಮವು ಗುಡ್‌ ಹೆಲ್ತ್‌, ವೆಲ್‌-ಬಿಯಿಂಗ್‌ ಆ್ಯಂಡ್‌ ಕ್ಲೈಮೆಟ್‌ ಆ್ಯಕ್ಷನ್‌ ಧ್ಯೇಯದೊಂದಿಗೆ ನೆರವೇರಲಿದೆ.

ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ಕಾರ್ಯಕ್ರಮವು 5 ಕಿ.ಮೀ. ಓಟದ ಜತೆಗೆ ಕ್ಲೀನ್‌ ಅಪ್‌ ಡ್ರೈವ್‌ ಒಳಗೊಂಡಿದೆ.

ಭಾಗವಹಿಸಲು ಇಚ್ಛಿಸುವವರು https://forms.gle/xdfTAexrsFpZut8z9 ಲಿಂಕ್‌ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next