Advertisement

Covid-19 ಮರಣಮೃದಂಗ; ಜಗತ್ತಿನಾದ್ಯಂತ 21 ಸಾವಿರ ಸಾವು, ಇಟಲಿಯಲ್ಲಿ ಸಾವಿನ ಸಂಖ್ಯೆ 7,500

11:07 AM Mar 27, 2020 | Nagendra Trasi |

ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ಗೆ ಜಗತ್ತಿನಾದ್ಯಂತ ಈವರೆಗೆ 21 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿಯೇ 7,500ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

Advertisement

ಜಗತ್ತಿನ ಹಲವು ದೇಶಗಳು ಕೋವಿಡ್ 19 ಕ್ಷಿಪ್ರವಾಗಿ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್, ಸೋಶಿಯಲ್ ಡಿಸ್ಟ್ಯಾನ್ಸಿಂಗ್ ಅನುಸರಿಸುತ್ತಿವೆ ಎಂದು ವರದಿ ವಿವರಿಸಿದೆ.

ಸ್ಪೇನ್ ನಲ್ಲಿಯೂ ಕೋವಿಡ್ 19 ಡೆಡ್ಲಿ ವೈರಸ್ ಗೆ ಸಾವನ್ನಪ್ಪಿದ್ದವರ ಸಂಖ್ಯೆ 3,600ಕ್ಕೆ ಏರಿಕೆಯಾಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ವೇಗದಲ್ಲಿ ಕೋವಿಡ್ 19 ಹರಡುತ್ತಿರುವುದು ಎಚ್ಚರಿಕೆ ಕರೆಗಂಟೆಯಾಗಿದೆ. ಅಮೆರಿಕದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 900ಕ್ಕೆ ಏರಿದ್ದು, 60 ಸಾವಿರ ಜನರಿಗೆ ಸೋಂಕು ಇರುವುದು ದೃಢವಾಗಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿಯೂ ಕೋವಿಡ್ 19 ಪೀಡಿತರ ಸಂಖ್ಯೆ 625ಕ್ಕೆ ಏರಿದ್ದು, ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ನಡೆಸುವಂತೆ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next